ಆ್ಯಪ್ನಗರ

Argentina vs Nigeria: ಗೆಲುವು, ಅದೃಷ್ಟದ ಬಲದಿಂದ ಪ್ರಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ

ಫಿಫಾ ವಿಶ್ವಕಪ್ ಲೀಗ್‌ನ ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅರ್ಜೆಂಟೀನಾ ತಂಡ ನೈಜೀರಿಯಾ ವಿರುದ್ಧ ಗೆಲುವು ಹಾಗೂ ಅದೃಷ್ಟದ ಬಲದಿಂದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ. ಈ ಮೂಲಕ ಮೆಸ್ಸಿ ತಂಡದ ಕಳಪೆ ಪ್ರದರ್ಶನದಿಂದ ಕಣ್ಣೀರಿಟ್ಟಿದ್ದ ಅರ್ಜೆಂಟೀನಾ ಹಾಗೂ ಲಯೋನೆಲ್ ಮೆಸ್ಸಿ ಅಭಿಮಾನಿಗಳು ಸಂತಸದಿಂದ ತೇಲಾಡಿದ್ದಾರೆ.

Vijaya Karnataka Web 27 Jun 2018, 1:12 pm
ಸೋಚಿ: ಫಿಫಾ ವಿಶ್ವಕಪ್ ಲೀಗ್‌ನ ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅರ್ಜೆಂಟೀನಾ ತಂಡ ನೈಜೀರಿಯಾ ವಿರುದ್ಧ ಗೆಲುವು ಹಾಗೂ ಅದೃಷ್ಟದ ಬಲದಿಂದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ. ಈ ಮೂಲಕ ಮೆಸ್ಸಿ ತಂಡದ ಕಳಪೆ ಪ್ರದರ್ಶನದಿಂದ ಕಣ್ಣೀರಿಟ್ಟಿದ್ದ ಅರ್ಜೆಂಟೀನಾ ಹಾಗೂ ಲಯೋನೆಲ್ ಮೆಸ್ಸಿ ಅಭಿಮಾನಿಗಳು ಸಂತಸದಿಂದ ತೇಲಾಡಿದ್ದಾರೆ.
Vijaya Karnataka Web messi


ಆಫ್ರಿಕಾ ರಾಷ್ಟ್ರವಾದ ನೈಜೀರಿಯಾ ಎದುರು ಸೋಚಿಯ ಫಿಸ್ಟ್‌ ಸ್ಟೇಡಿಯಂನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಅರ್ಜೆಂಟೀನಾ ಉತ್ತಮ ಆಟವಾಡುವ ಮೂಲಕ 2 - 1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ನಡೆದ 'ಡಿ' ಗ್ರೂಪ್‌ನ ಮತ್ತೊಂದು ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಐಸ್‌ಲೆಂಡ್‌ 2 - 1 ಅಂತರದಿಂದ ದಿಗ್ವಿಜಯ ಸಾಧಿಸಿದ ಬಳಿಕ ಅರ್ಜೆಂಟೀನಾ ಹಾಗೂ ಸೂಪರ್‌ ಸ್ಟಾರ್ ಮೆಸ್ಸಿಯ ಪ್ರೀ ಕ್ವಾರ್ಟರ್ ಫೈನಲ್‌ನ ಕನಸು ಮತ್ತೆ ಚಿಗುರೊಡೆಯಿತು.

ಸೋಚಿಯಲ್ಲಿ ನಡೆದ ಪಂದ್ಯದ 14ನೇ ನಿಮಿಷದಲ್ಲಿ ವಿಶ್ವದ ಮೆಚ್ಚಿನ ಫುಟ್ಬಾಲ್ ಆಟಗಾರರಲ್ಲೊಬ್ಬರಾದ ಲಯೋನೆಲ್ ಮೆಸ್ಸಿ ಅದ್ಭುತವಾದ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದರು. ಅಲ್ಲದೆ, ವಿಶ್ವಕಪ್‌ನಲ್ಲಿ ತಮ್ಮ ಗೋಲಿನ ಖಾತೆಯನ್ನು ತೆರೆದರು. ಆದರೆ, 27 ಹಾಗೂ 34 ನಿಮಿಷಗಳಲ್ಲಿ ಗೋಲು ಗಳಿಸುವ ಉತ್ತಮ ಅವಕಾಶವನ್ನು ನೈಜೀರಿಯಾದ ಗೋಲ್‌ ಕೀಪರ್‌ ಫ್ರಾನ್ಸಿಸ್‌ ಉಜೋಹೋರ ಕಾರಣದಿಂದ ತಪ್ಪಿಸಿಕೊಂಡಿತು. ಇನ್ನು, ಪಂದ್ಯದ ಮೊದಲಾರ್ಧದ ಅಂತ್ಯದಲ್ಲಿ ನೈಜೀರಿಯಾಗೆ ಕಾರ್ನರ್ ಅವಕಾಶ ಸಿಕ್ಕರೂ ಸಹ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, 1 - 0 ಅಂತರದಿಂದ ಅರ್ಜೆಂಟೀನಾ ತಂಡ ಮುನ್ನಡೆ ಸಾಧಿಸಿತು.

ಬಳಿಕ ಫಿಶ್ಟ್‌ ಕ್ರೀಡಾಂಗಣದಲ್ಲಿ ನಡೆದ 'ಡಿ' ಗ್ರೂಪ್‌ನ ಪಂದ್ಯದ ದ್ವಿತೀಯಾರ್ಧದ 51ನೇ ನಿಮಿಷದಲ್ಲಿ ನೈಜೀರಿಯಾ ತಂಡದ ವಿಕ್ಟರ್ ಮೋಸಸ್ ಗೋಲು ಬಾರಿಸಿ ಸಮಬಲ ಸಾಧಿಸಿದರು. ಆದರೆ, 86 ನಿಮಿಷದಲ್ಲಿ ಅರ್ಜೆಂಟೀನಾ ತಂಡದ ಮಾರ್ಕೊಸ್ ರೋಜೊ ತನ್ನ ಕಾಲ್ಚಳಕದ ನೆರವಿನಿಂದ ಗೋಲು ಗಳಿಸಿ ತಂಡದ ಗೆಲುವಿಗೆ ಹಾಗೂ ಪ್ರಿ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ನೀಡಲು ನೆರವಾದ್ರು. ಒಟ್ಟಾರೆ, ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನ ಆರಂಭಿಕ ಲೀಗ ಪಂದ್ಯಗಳಲ್ಲಿ ಕಳಪೆ ಪ್ರದರ್ಶನದಿಂದ ವಿಶ್ವದ ಆಕ್ರೋಶಕ್ಕೆ ಕಾರಣವಾಗಿದ್ದ ಮೆಸ್ಸಿ ಹಾಗೂ ಅರ್ಜೆಂಟೀನಾ ಗೆಲುವಿನ ಬಳಿಕ ನಿಟ್ಟುಸಿರು ಬಿಟ್ಟಿದ್ದು, ಸಂತಸದಿಂದ ತೇಲಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌