ಕತಾರ್: ಇಲ್ಲಿ ನಡೆಯುತ್ತಿರುವ 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕಳೆದ ಎರಡು ದಿನಗಳಿಂದ ಎರಡು ಆಘಾತಕಾರಿ ಫಲಿತಾಂಶಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿವೆ. ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ, ಸೌದಿ ಅರೇಬಿಯಾ ವಿರುದ್ದ ಸೋತಿದ್ದರೆ, ನಾಲ್ಕು ಬಾರಿ ಚಾಂಪಿಯನ್ಸ್ ಜರ್ಮನಿ 'ಇ' ಗುಂಪಿನ ಪಂದ್ಯದಲ್ಲಿ ಜಪಾನ್ ಎದುರು ಬುಧವಾರ ಸೋಲಿನ ಆಘಾತ ಅನುಭವಿಸಿದೆ. ಸೌದಿ ಅರೇಬಿಯಾ ತಂಡದಂತೆ ಜಪಾನ್ ತಂಡ ಕೂಡ ಆರಂಭದಲ್ಲಿ 0-1 ಹಿನ್ನಡೆ ಅನುಭವಿಸಿತ್ತು. ಆದರೆ, ನಂತರ ಬಲವಾಗಿ ಕಮ್ಬ್ಯಾಕ್ ಮಾಡಿದ್ದ ಜಪಾನ್ 2-1 ಅಂತರದಲ್ಲಿ ಜರ್ಮನಿ ತಂಡವನ್ನು ಮಣಿಸಿತು. ಅಂದಹಾಗೆ ಮೊದಲ ಅವಧಿಯಲ್ಲಿ ಜರ್ಮನಿ ತಂಡ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಅದರಂತೆ 1-0 ಮುನ್ನಡೆ ಪಡೆದಿತ್ತು. 33ನೇ ನಿಮಿಷದಲ್ಲಿ ಗ್ವೆಂಡಾನ್ ಪೆನಾಲ್ಟಿಯಲ್ಲಿ ಗೋಲು ಗಳಿಸಿ ಜರ್ಮನಿ ಮುನ್ನಡೆಗೆ ನೆರವಾಗಿದ್ದರು.
ನಂತರ ಎರಡನೇ ಅವಧಿಯಲ್ಲಿ ಜರ್ಮನಿ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅದರಲ್ಲೂ ವಿಶೇಷವಾಗಿ ಜರ್ಮನಿ ಡಿಫೆಂಡರ್ಗಳು ಜಪಾನ್ ತಂಡದ ಫಾವರ್ಡ್ ಆಟಗಾರರನ್ನು ನಿಯಂತ್ರಿಸಿದ್ದರು. ಆ ಮೂಲಕ ಎರಡನೇ ಅವಧಿಯಲ್ಲಿಯೂ ಜರ್ಮನಿ ಬಹುತೇಕ ಮೇಲುಗೈ ಸಾಧಿಸಿತ್ತು. ಆದರೆ, ಪಂದ್ಯದ ಕೊನೆಯ 15 ನಿಮಿಷಗಳಲ್ಲಿ ಜಪಾನ್, ಇಬ್ಬರು ಹೆಚ್ಚುವರಿ ಆಟಗಾರರಾದ ರಿತ್ಸು ಡಯಾನ್ ಹಾಗೂ ತಕುಮಾ ಅಸಾನೊ ಅವರನ್ನು ಕಣಕ್ಕೆ ಇಳಿಸಿತು.
ಇಬ್ಬರು ಹೆಚ್ಚುವರಿ ಆಟಗಾರರನ್ನು ಕಣಕ್ಕೆ ಇಳಿಸಿದ ಜಪಾನ್ ತಂಡದ ತಂತ್ರ ಕೈ ಹಿಡಿಯಿತು. 75 ಹಾಗೂ 83ನೇ ನಿಮಿಷಗಳಲ್ಲಿ ಜಪಾನ್ ಸತತ ಎರಡು ಗೋಲುಗಳನ್ನು ತನ್ನ ಖಾತೆಗೆ ಹಾಕಿಕೊಂಡಿತು. ಆ ಮೂಲಕ 2-1 ಮುನ್ನಡೆ ಪಡೆಯಿತು. ಅಂತಿಮವಾಗಿ ಜಪಾನ್ ತಂಡ ಗೆದ್ದು ಮಾಜಿ ಚಾಂಪಿಯನ್ಸ್ ಜರ್ಮನಿಗೆ ಆಘಾತ ನೀಡಿತು.
ಕಳೆದ 2018ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿಯೂ ಜರ್ಮನಿಗೆ ಟೂರ್ನಿಯ ಆರಂಭದಲ್ಲಿ ಇದೇ ರೀತಿಯ ಸೋಲು ಎದುರಾಗಿತ್ತು. ಕಳೆದ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಮೆಕ್ಸಿಕೊ ಎದುರು ಸೋಲು ಅನುಭವಿಸಿದ್ದ ಜರ್ಮನಿ, ನಂತರ ತನ್ನ ಎರಡನೇ ಪಂದ್ಯದಲ್ಲಿಯೂ ದಕ್ಷಿಣ ಕೊರಿಯಾ ಎದುರು ಸೋತು ನಿರಾಶೆ ಅನುಭವಿಸಿತ್ತು. ಇದೀಗ ಅದೇ ಪರಿಸ್ಥಿತಿ ಈ ಟೂರ್ನಿಯಲ್ಲಿಯೂ ಮರುಕಳಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಅಂದಹಾಗೆ ಪಂದ್ಯದ ಬಹುತೇಕ ಅವಧಿಯಲ್ಲಿ ಜರ್ಮನಿ ಪ್ರಾಬಲ್ಯ ಸಾಧಿಸಿತ್ತು. ಆದರೆ, ಕೊನೆಯ ಹಂತದಲ್ಲಿ ಗೋಲು ಗಳಿಸಬಹುದಾದ ಕೆಲ ಅವಕಾಶಗಳನ್ನು ಕೈಚೆಲ್ಲಿಕೊಂಡಿತ್ತು. ಇದರ ಲಾಭ ಪಡೆದ ಜಪಾನ್ ನಿರ್ಣಾಯಕ ಹಂತದಲ್ಲಿ ಆಕ್ರಮಣಕಾರಿ ಆಟವಾಡಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿತು.
ಪಂದ್ಯದ 75ನೇ ನಿಮಿಷದಲ್ಲಿ ಹೆಚ್ಚುವರಿ ಆಟಗಾರ ರಿತ್ಸು ಡಯಾನ್ ಗೋಲು ಗಳಿಸಿ ಪಂದ್ಯವನ್ನು 1-1 ಸಮಬಲ ಸಾಧಿಸಲು ಜಪಾನ್ಗೆ ನೆರವಾದರು. ಇದರ ಬೆನ್ನಲ್ಲೆ ಅಂದರೆ ಕೇವಲ ಎಂಟು ನಿಮಿಷಗಳ ಅಂತರದಲ್ಲಿ ತಕುಮಾ ಅಸಾನೊ ಅವರು ಚೆಂಡನ್ನು ಗೋಲು ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಜಪಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಒಟ್ಟಾರೆ ಈ ಪಂದ್ಯದಲ್ಲಿ ಜರ್ಮನಿ ಒಟ್ಟು 26 ಬಾರಿ ಬಲವಾಗಿ ಶಾಟ್ ಮಾಡಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಎದುರಾಳಿ ಜಪಾನ್ 12 ಬಾರಿ ಶಾಟ್ ಹೊಡೆದಿತ್ತು. ಇದರ ಫಲವಾಗಿ ಕೊನೆಯ ಹಂತದಲ್ಲಿ ಇದರ ಲಾಭ ಪಡೆದುಕೊಂಡಿತ್ತು.