ಆ್ಯಪ್ನಗರ

ಸತತ 2ನೇ ಗೆಲುವಿನೊಂದಿಗೆ ನಾಕೌಟ್‌ನತ್ತ ಫ್ರಾನ್ಸ್ ಹೆಜ್ಜೆ

ರಷ್ಯಾದಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಫ್ರಾನ್ಸ್ ನಾಕೌಟ್ ಹಂತದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

TOI.in 22 Jun 2018, 11:04 am
ಮಾಸ್ಕೊ: ರಷ್ಯಾದಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಫ್ರಾನ್ಸ್ ನಾಕೌಟ್ ಹಂತದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
Vijaya Karnataka Web france-01


ಗುರುವಾರ ನಡೆದ ಸಿ ಗುಂಪಿನ ಮಗದೊಂದು ಮಹತ್ವದ ಪಂದ್ಯದಲ್ಲಿ ಪೆರು ವಿರುದ್ಧ ಫ್ರಾನ್ಸ್ 1-0 ಗೋಲುಗಳ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ.

ಈ ಗೆಲುವಿನೊಂದಿಗೆ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿರುವ ಫ್ರಾನ್ಸ್ ಪ್ರಿ ಕ್ವಾರ್ಟರ್ ಫೈನಲ್‌ನತ್ತ ದಾಪುಗಾಲನ್ನಿಟ್ಟಿದೆ.

ಅತ್ತ ಸತತ ಎರಡನೇ ಪಂದ್ಯದಲ್ಲೂ ಸೋಲು ಅನುಭವಿಸಿರುವ ಪೆರು ವಿಶ್ವಕಪ್ ಕನಸು ಬಹುತೇಕ ಅಂತ್ಯಗೊಂಡಿದೆ.

34ನೇ ನಿಮಿಷದಲ್ಲಿ ಗೋಲು ದಾಖಲಿಸಿದ 19ರ ಹರೆಯದ ಯುವ ತಾರೆ ಕೈಲ್ಯಾನ್ ಎಂಬಾಪ್ ವಿಜಯದ ರೂವಾರಿ ಎನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌