ಆ್ಯಪ್ನಗರ

ರಷ್ಯಾಗೆ ಸೈಕಲ್‌ ತುಳಿದ ಕೇರಳದ ಫುಟ್ಬಾಲ್‌ ಅಭಿಮಾನಿ

ಕೇರಳ ಮೂಲದ ಫುಟ್ಬಾಲ್‌ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ಆಟಗಾರ ಅರ್ಜೆಂಟೀನಾದ ತಾರೆ ಲಿಯೋನೆಲ್‌ ಮೆಸ್ಸಿ ಅವರನ್ನು ಭೇಟಿಯಾಗಲು ಸೈಕಲ್‌ ಮೂಲಕ ರಷ್ಯಾ ತಲುಪುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Vijaya Karnataka 19 Jun 2018, 10:17 am
ತಿರುವನಂತಪುರ: ಕೇರಳ ಮೂಲದ ಫುಟ್ಬಾಲ್‌ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ಆಟಗಾರ ಅರ್ಜೆಂಟೀನಾದ ತಾರೆ ಲಿಯೋನೆಲ್‌ ಮೆಸ್ಸಿ ಅವರನ್ನು ಭೇಟಿಯಾಗಲು ಸೈಕಲ್‌ ಮೂಲಕ ರಷ್ಯಾ ತಲುಪುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web Clifin-Francis-01


28 ವರ್ಷದ ಕ್ಲಿಫಿನ್‌ ಫ್ರಾನ್ಸಿಸ್‌, ಮೊದಲಿಗೆ ಕೇರಳದಿಂದ ದುಬೈಗೆ ವಿಮಾನ ಮೂಲಕ ತಲುಪಿ, ನಂತರ ಸೈಕಲ್‌ ಒಂದನ್ನು ಖರೀದಿಸಿ ಹಡಗಿನ ಮೂಲಕ ಇರಾನ್‌ನ ದಕ್ಷಿಣ ಭಾಗದಿಂದ ಸೈಕಲ್‌ ಸವಾರಿ ಆರಂಭಿಸಿ ಇದೀಗ ರಷ್ಯಾದ ಗಡಿ ಭಾಗ ಟಾಂಬೊವ್‌ ತಲುಪಿದ್ದಾರೆ.

''ಬಹಳ ಖುಷಿಯಾಗಿದೆ. ಇದು ನಾಲ್ಕು ತಿಂಗಳ ಸುದೀರ್ಘಾವಧಿಯ ಪಯಣ,'' ಎಂದು ಫ್ರಾನ್ಸಿಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಜೂನ್‌ 26ರಂದು ನಡೆಯಲಿರುವ ಫ್ರಾನ್ಸ್‌ ಮತ್ತು ಡೆನ್ಮಾರ್ಕ್‌ ನಡುವಣ ಪಂದ್ಯಕ್ಕೆ ಟಿಕೆಟ್‌ ಖರೀದಿಸಿರುವ ಫ್ರಾನ್ಸಿಸ್‌, ಪಂದ್ಯ ಆರಂಭಕ್ಕೂ ಮುನ್ನ ರಷ್ಯಾ ತಲುಪುವ ಆಶಯ ಹೊಂದಿದ್ದರು. ಇದೀಗ ಎಲ್ಲವೂ ಸರಿಯಾಗಿ ಸಾಗಿದಲ್ಲಿ ಜೂನ್‌ 21ರಂದು ಮಾಸ್ಕೊ ತಲುಪಲಿದ್ದಾರೆ.


''ಪ್ರತಿ ದಿನವೂ ಹೊಸ ಜನರನ್ನು ಭೇಟಿಯಾಗಬಹುದು. ಹೊಸ ತಾಣಗಳನ್ನು ನೋಡಬಹುದು. ಹೊಸ ಸಂಸ್ಕೃತಿಗಳನ್ನು ಎದುರಾಗಬಹುದು,'' ಎಂದು ತಮ್ಮ ರಷ್ಯಾ ಪ್ರಯಾಣದಲ್ಲಿನ ತಮ್ಮ ಅನುಭವವನ್ನು ಫ್ರಾನ್ಸಿಸ್‌ ಹಂಚಿಕೊಂಡಿದ್ದಾರೆ.

ಎಲ್ಲ ರೀತಿಯ ದಾಖಲೆ ಪತ್ರಗಳು ಮತ್ತು ವೀಸಾ ಇದ್ದರೂ ಕೂಡ ಜಾರ್ಜಿಯಾ ಮತ್ತು ಅಜೆರ್‌ಬೈಜಾನ್‌ನಲ್ಲಿ ಪ್ರವೇಶಕ್ಕೆ ಅನುಮತಿ ಸಿಗದೆ ಬೇರೆ ಮಾರ್ಗ ತೆಗೆದುಕೊಳ್ಳಲು ಸೂಚಿಸಲಾಯಿತು ಎಂದು ತಾವು ಎದುರಿಸಿದ ಅಡೆತಡೆಗಳನ್ನೂ ಫ್ರಾನ್ಸಿಸ್‌ ವಿವರಿಸಿದ್ದಾರೆ.

''ಜರ್ಮನ್‌ ಸೈಕ್ಲಿಸ್ಟ್‌ಗಳಿಗೆ ಪ್ರವೇಶ ನೀಡಿ, ನನಗೆ ಅನುಮತಿ ನಿರಾಕರಿಸಿದವರ ಸ್ವಭಾವ ಕಂಡು ಬೇಸರವಾಯಿತು. ಆದರೆ, ಮನುಷ್ಯತ್ವ ಎಲ್ಲೆಡೆ ಉಳಿದಿದೆ. ಹೆಚ್ಚಿನ ಕಡೆ ಅಪರಿಚಿತರು ನನಗೆ ಆಸರೆ ನೀಡಿದರಲ್ಲದೆ, ಉಳಿದುಕೊಳ್ಳಲು ಸ್ಥಳ, ಊಟ ಮತ್ತು ಬಟ್ಟೆ ಎಲ್ಲವನ್ನೂ ಕೊಟ್ಟು ಔದಾರ್ಯ ಮೆರೆದರು,'' ಎಂದು ವೃತ್ತಿಯಲ್ಲಿ ಇಂಜಿನೀಯರ್‌ ಆಗಿರುವ ಫ್ರಾನ್ಸಿಸ್‌ ಹೇಳಿದ್ದಾರೆ. ''ಇಲ್ಲಿಯ ವರೆಗೆ ತಲುಪಿದ್ದೇನೆ. ಆದರೆ ನನ್ನ ಕನಸು ಮೆಸ್ಸಿ ಅವರನ್ನು ಭೇಟಿಯಾಗುವುದು. ಅದು ಸಾಧ್ಯವಾಗುತ್ತದೆ ಎಂಬ ಆಶಾಭಾವ ನನ್ನದು,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌