ಆ್ಯಪ್ನಗರ

ಪ್ರಿ ಕ್ವಾರ್ಟರ್‌ ಫೈನಲ್‌ಗೆ ಮೆಕ್ಸಿಕೊ

ಕಾರ್ಲೋಸ್‌ ವೆಲಾ(26ನೇ ನಿ.ಪೆನಾಲ್ಟಿ) ಮತ್ತು ಜೇವಿಯರ್‌ ಹೆರ್ನಾಂಡ್ಜ್‌ (66ನೇ ನಿಮಿಷ) ತಂದಿಟ್ಟ ಗೋಲ್‌ಗಳ ನೆರವಿನಿಂದ ಮೆಕ್ಸಿಕೊ ತಂಡ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ ಗಳಿಸಿತು.

Vijaya Karnataka 24 Jun 2018, 9:57 am
ರಾಸ್ಟೋವ್‌ ಅನ್‌ ಡಾನ್‌: ಕಾರ್ಲೋಸ್‌ ವೆಲಾ(26ನೇ ನಿ.ಪೆನಾಲ್ಟಿ) ಮತ್ತು ಜೇವಿಯರ್‌ ಹೆರ್ನಾಂಡ್ಜ್‌ (66ನೇ ನಿಮಿಷ) ತಂದಿಟ್ಟ ಗೋಲ್‌ಗಳ ನೆರವಿನಿಂದ ಮೆಕ್ಸಿಕೊ ತಂಡ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ ಗಳಿಸಿತು. ಇದರೊಂದಿಗೆ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು ಆರು ಅಂಕ ಕಲೆಹಾಕಿದ ಮೆಕ್ಸಿಕೊ ತಂಡ ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವುದರ ಜತೆಗೆ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.
Vijaya Karnataka Web Fifa2


ಇಲ್ಲಿನ ರಾಸ್ಟೋವ್‌ ಅರೆನಾದಲ್ಲಿ ಶನಿವಾರ ನಡೆದ ‘ಎಫ್‌ ’ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ 2-0 ಗೋಲ್‌ಗಳಿಂದ ಕೊರಿಯಾಗೆ ಆಘಾತ ನೀಡಿತು. ಈ ಸೋಲಿನೊಂದಿಗೆ ಆಡಿದ ಎರಡು ಪಂದ್ಯಗಳಲ್ಲಿ ಖಾತೆ ತೆರೆಯದ ಕೊರಿಯಾ, 16ರ ಹಂತದಿಂದ ನಿರ್ಗಮಿಸಿತು.

ಪಂದ್ಯದ ಮೊದಲಾರ್ಧಕ್ಕೆ 1-0 ಅಂತರದ ಮುನ್ನಡೆಯಲ್ಲಿದ್ದ ಮೆಕ್ಸಿಕೊ ದ್ವಿತೀಯಾರ್ಧದಲ್ಲಿಯೂ ಒಂದು ಗೋಲ್‌ ಗಳಿಸಿ ಜಯದ ಅಂತರವನ್ನು ಹೆಚ್ಚಿಸಿತು. ಪ್ರಥಮಾರ್ಧದ 26ನೇ ನಿಮಿಷದಲ್ಲಿ ಕೊರಿಯಾ ಆಟಗಾರರ ಪ್ರಮಾದದಿಂದಾಗಿ ಪೆನಾಲ್ಟಿ ಅವಕಾಶ ಗಳಿಸಿದ ಮೆಕ್ಸಿಕೊ ಪರ ಕಾರ್ಲೋಸ್‌ ಅಮೋಘ ಗೋಲ್‌ ಗಳಿಸಿ ತಂಡ ಖಾತೆ ತೆರೆಯುವಲ್ಲಿ ನೆರವಾದರು. ನಂತರ ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ಕೊರಿಯಾ ಆಟಗಾರರು ನಿರಂತರ ಶ್ರಮಿಸಿದರು. ಈ ವೇಳೆ ಹಲವು ಬಾರಿ ಪ್ರಮಾದಗಳನ್ನೆಸಗಿದ ಪರಿಣಾಮ ಕೊರಿಯಾದ ನಾಲ್ವರು ಆಟಗಾರರು ರೆಫರಿಯಿಂದ ಹಳದಿ ಕಾರ್ಡ್‌ ಎಚ್ಚರಿಕೆ ಪಡೆದರೆ, ಮೆಕ್ಸಿಕೊ ಕೌಶಲಯುತ ಆಟದೊಂದಿಗೆ ಪ್ರಜ್ವಲಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌