ಆ್ಯಪ್ನಗರ

ವಿಶ್ವಕಪ್ ಆರಂಭಕ್ಕೂ ಮೊದಲೇ ಹೊಡೆತ; ಸ್ಪೇನ್ ಕೋಚ್ ವಜಾ

ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಆರಂಭಕ್ಕೂ ಮೊದಲೇ ಸ್ಪೇನ್ ಭಾರಿ ಹೊಡತಕ್ಕೊಳಗಾಗಿದೆ. ಅಲ್ಲದೆ ತಂಡದ ಪ್ರಮುಖ ಕೋಚ್ ಯುಲನ್‌ ಲೊಪೆಟೆ ಅವರನ್ನು ವಜಾಗೊಳಿಸಲಾಗಿದೆ.

TOI.in 13 Jun 2018, 5:23 pm
ರಷ್ಯಾ: ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಆರಂಭಕ್ಕೂ ಮೊದಲೇ ಸ್ಪೇನ್ ಭಾರಿ ಹೊಡತಕ್ಕೊಳಗಾಗಿದೆ. ಅಲ್ಲದೆ ತಂಡದ ಪ್ರಮುಖ ಕೋಚ್ ಯುಲನ್‌ ಲೊಪೆಟೆ ಅವರನ್ನು ವಜಾಗೊಳಿಸಲಾಗಿದೆ.
Vijaya Karnataka Web Julen-Lopetegui


ಪೋರ್ಚುಗಲ್ ವಿರುದ್ಧ ಶುಕ್ರವಾರ ನಡೆಯಲಿರುವ 'ಬಿ' ಗುಂಪಿನ ಮಹತ್ವದ ಪಂದ್ಯಕ್ಕೂ ಮುನ್ನ ಇಂತಹದೊಂದು ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ.

ರಷ್ಯಾ ವಿಶ್ವಕಪ್ ಬಳಿಕ ರಿಯಲ್ ಮ್ಯಾಡ್ರಿಡ್ ಮ್ಯಾನೇಜರ್ ಆಗಿ ಯುಲನ್ ಅವರನ್ನು ನೇಮಕಗೊಳಿಸಲಾಗಿತ್ತು. ಇದು ಸ್ಪೇನ್ ಫುಟ್ಬಾಲ್ ಫೆಡರೇಷನ್ ಹಾಗೂ ಅಭಿಮಾನಿಗಳಲ್ಲಿ ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು.

ರಷ್ಯಾದಲ್ಲಿ ಸ್ಪೇನ್ ನೆಲೆಸಿರುವ ಕ್ರಾಸ್ನೋಡರ್‌ನಲ್ಲಿ ನಡೆಸಿರುವ ಪ್ರತಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಸ್ಪಾನಿಶ್ ಫುಟ್ಬಾಲ್ ಫೇಡರೇಷನ್ ಮುಖ್ಯಸ್ಥ ಲೂಯಿಸ್ ರುಬಿಯಾಲೆಸ್, ''ನಾವು ವಂಚನೆಗೊಳಗಾಗಿದ್ದೇವೆ ಎಂದು ಭಾವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕೋಚ್ ಅವರನ್ನು ವಜಾಗೊಳಿಸುವುದಾಗಿ" ತಿಳಿಸಿದರು.

2016 ಜುಲೈ ತಿಂಗಳಲ್ಲಿ ಸ್ಪೇನ್ ಕೋಚ್ ಆಗಿ ಯುಲನ್ ನೇಮಕಗೊಂಡಿದ್ದರು. ಅಲ್ಲದೆ ಅವರ ಮಾರ್ಗದರ್ಶನದಲ್ಲಿ ಸ್ಪೇನ್ ತಂಡವು ಸತತ 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ವಿಶ್ವಕಪ್‌ನತ್ತ ಮುನ್ನುಗ್ಗಿತ್ತು. ಆದರೆ ವಿಶ್ವಕಪ್‌ಗೂ ಆರಂಭಕ್ಕೂ ಹಿಂದಿನ ದಿನ ನಡೆದ ಈ ಅಚ್ಚರಿಯ ಬೆಳವಣಿಗೆಯಿಂದ ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಭೀತಿಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌