ಆ್ಯಪ್ನಗರ

ಉರುಗ್ವೆಗೆ ಸತತ ಜಯ

ಎಫ್‌ಸಿ ಬಾರ್ಸಿಲೋನಾದ ಸ್ಟಾರ್‌ ಸ್ಟ್ರೈಕರ್‌ ಲೂಯಿಸ್‌ ಸ್ವಾರೆಸ್‌ ದಾಖಲಿಸಿದ ಏಕೈಕ ಗೋಲ್‌ನಿಂದ ಮಿಂಚಿದ ಮಾಜಿ ಚಾಂಪಿಯನ್ಸ್‌ ಉರುಗ್ವೆ ತಂಡ, ವಿಶ್ವಕಪ್‌ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಸೌದಿ ಸರೇಬಿಯಾ ವಿರುದ್ಧ 1-0 ಅಂತರದ ಜಯ ದಾಖಲಿಸಿತು.

Vijaya Karnataka 21 Jun 2018, 9:55 am
ಮಾಸ್ಕೊ: ಎಫ್‌ಸಿ ಬಾರ್ಸಿಲೋನಾದ ಸ್ಟಾರ್‌ ಸ್ಟ್ರೈಕರ್‌ ಲೂಯಿಸ್‌ ಸ್ವಾರೆಸ್‌ ದಾಖಲಿಸಿದ ಏಕೈಕ ಗೋಲ್‌ನಿಂದ ಮಿಂಚಿದ ಮಾಜಿ ಚಾಂಪಿಯನ್ಸ್‌ ಉರುಗ್ವೆ ತಂಡ, ವಿಶ್ವಕಪ್‌ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಸೌದಿ ಸರೇಬಿಯಾ ವಿರುದ್ಧ 1-0 ಅಂತರದ ಜಯ ದಾಖಲಿಸಿತು.
Vijaya Karnataka Web uruguay


ಇಲ್ಲಿನ ರೊಸ್ತೊವ್‌ ಅರೆನಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿದ ಉರುಗ್ವೆ ಪರ 23ನೇ ನಿಮಿಷದಲ್ಲಿ ಗೋಲ್‌ ದಾಖಲಿಸಿ ಸ್ವಾರೆಸ್‌ ಜಯದ ರೂವಾರಿ ಎನಿಸಿ ಪಂದ್ಯಶ್ರೇಷ್ಠ ಗೌರವ ಪಡೆದರು.

ಈ ಜಯದೊಂದಿಗೆ 'ಎ' ಗುಂಪಿನಲ್ಲಿ ಒಟ್ಟಾರೆ 6 ಅಂಕಗಳನ್ನು ಸಂಪಾದಿಸಿರುವ 2 ಬಾರಿಯ ಚಾಂಪಿಯನ್ಸ್‌ ಉರುಗ್ವೆ 2ನೇ ಸ್ಥಾನ ಅಲಂಕರಿಸಿದ್ದು, ನಾಕ್‌ಔಟ್‌ ಅರ್ಹತೆ ಪಡೆದುಕೊಂಡಿದೆ. ಉರುಗ್ವೆ ಲೀಗ್‌ ಹಂತದಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ ಆತಿಥೇಯ ರಷ್ಯಾ ವಿರುದ್ಧ ಪೈಪೋಟಿ ನಡೆಸಲಿದ್ದು, ಅಂಕ ಪಟ್ಟಿಯ ಅಗ್ರಸ್ಥಾನ ಗಳಿಸುವತ್ತ ಎದುರು ನೋಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌