ಆ್ಯಪ್ನಗರ

PKL 2019: ಯು ಮುಂಬಾ ಮುಂದೆ ಬೆಂಗಳೂರು ಬುಲ್ಸ್‌ ವಿಕ್ರಮ

ಪ್ರೊ ಕಬಡ್ಡಿ ಲೀಗ್ 2019ನೇ ಸಾಲಿನ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಯು ಮುಂಬಾ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಮಗದೊಮ್ಮೆ ಬೆಂಗಳೂರು ಪರ ಪವನ್ ಸೆಹ್ರಾವತ್ ಗೆಲುವಿನ ರೂವಾರಿ ಎನಿಸಿದರು.

Vijaya Karnataka Web 28 Sep 2019, 8:44 am
ಜೈಪುರ: ಪವನ್‌ ಶೆಹ್ರಾವತ್‌ ಸಂಘಟಿಸಿದ ಅಮೋಘ ರೇಡಿಂಗ್‌ ನೆರವಿನಿಂದ ಮಿಂಚಿದ ಬೆಂಗಳೂರು ಬುಲ್ಸ್‌ 35-33 ಅಂಕಗಳ ಅಂತರದಿಂದ ಯು. ಮುಂಬಾ ತಂಡಕ್ಕೆ ಸೋಲುಣಿಸಿದೆ.
Vijaya Karnataka Web pawan-sehrawat-04


ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 109ನೇ ಪಂದ್ಯದಲ್ಲಿಗೆಲುವಿನ ಗೆಲುವಿನ ನಗೆ ಬೀರಿದ ಬುಲ್ಸ್‌, ಅಂಕ ಪಟ್ಟಿಯಲ್ಲಿನಾಲ್ಕನೇ ಸ್ಥಾನ ಕಾಪಾಡಿಕೊಂಡಿತು.

ಹೆರಿಗೆಯ ಬಳಿಕ 26 ಕೆ.ಜಿ ತೂಕ ಇಳಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

17-11 ಅಂತರದಲ್ಲಿಪ್ರಥಮಾರ್ಧವನ್ನು ಮುಕ್ತಾಯಗೊಳಿಸಿದ್ದ ಬೆಂಗಳೂರು ಬುಲ್ಸ್‌ ಆಟಗಾರರು ದ್ವಿತೀಯಾರ್ಧದಲ್ಲಿಒಮ್ಮಿಂದೊಮ್ಮೆಲೇ ಸ್ಥಿರತೆ ಕಳೆದುಕೊಂಡು ಎದುರಾಳಿಗೆ ಬರೋಬ್ಬರಿ ಅಂಕಗಳನ್ನು ನೀಡಿದರು. ಇದರಿಂದಾಗಿ ಕೊನೆಯ ನಿಮಿಷದಲ್ಲಿ ಪಂದ್ಯ ರೋಚಕ ರೂಪ ತಾಳಿತಾದರೂ, ಅಂತಿಮವಾಗಿ ಬುಲ್ಸ್‌ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು.

ಬುಲ್ಸ್‌ ಪರ ಪವನ್‌ ಶೆಹ್ರಾವತ್‌ 10 ಅಂಕಗಳನ್ನು ಸಂಪಾದಿಸಿದರೆ, ಸೌರಭ್‌ ನಂದಾಲ್‌ 9 ಅಂಕ ಗಿಟ್ಟಿಸಿದರು. ಮುಂಬಾದ ಅಭಿಷೇಕ್‌ ಸಿಂಗ್‌ ಗಳಿಸಿದ 10 ಅಂಕ ಪ್ರಯೋಜನಕ್ಕೆ ಬರಲಿಲ್ಲ.

ಈ ಗೆಲುವಿನೊಂದಿಗೆ ಆಡಿರುವ 19 ಪಂದ್ಯಗಳಲ್ಲಿ 10 ಗೆಲುವುಗಳನ್ನು ದಾಖಲಿಸಿರುವ ಬೆಂಗಳೂರು ಬುಲ್ಸ್ ಒಟ್ಟು 58 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ 18 ಪಂದ್ಯಗಳಲ್ಲಿ ಒಂಬತ್ತು ಗೆಲುವು ದಾಖಲಿಸಿರುವ ಯು ಮುಂಬಾ 54 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಅಗ್ರ ಎರಡು ಸ್ಥಾನದಲ್ಲಿರುವ ದಬಾಂಬ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಈಗಾಗಲೇ ಪ್ಲೇಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಮೂರನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ 17 ಪಂದ್ಯಗಳಲ್ಲಿ 11 ಗೆಲುವಿನೊಂದಿಗೆ 59 ಅಂಕಗಳನ್ನು ಪಡೆದಿದೆ.

ದೀಪಕ್‌ ಪೂನಿಯಾ ವಿಶ್ವದ ನಂ.1 ಕುಸ್ತಿಪಟು, ಬಜರಂಗ್‌ ಕೈತಪ್ಪಿದ ಅಗ್ರ ಪಟ್ಟ

ಜೈಪುರದ ವಿರುದ್ಧ ಭರ್ಜರಿಯಾಗಿ ಗೆದ್ದ ಟೈಟನ್ಸ್‌-

ಪ್ರಸಕ್ತ ಟೂರ್ನಿಯಲ್ಲಿಇದುವರೆಗೆ ನಿರಾಶಾದಾಯಕ ಪ್ರದರ್ಶನ ನೀಡಿದ್ದ ತೆಲುಗು ಟೈಟನ್ಸ್‌ ತಂಡ ಏಕಾಏಕಿ ಚೇತೋಹಾರಿ ಪ್ರದರ್ಶನ ನೀಡಿತಲ್ಲದೆ, ಆತಿಥೇಯ ಜೈಪುರ ತಂಡದ ವಿರುದ್ಧ 51-31 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ಟೈಟನ್ಸ್‌ ತಂಡದ ಪರ ಸಿದ್ಧಾರ್ಥ ದೇಸಾಯಿ 22 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇಂದಿನ ಪಂದ್ಯಗಳು
ಹರಿಯಾಣ ಸ್ಟೀಲರ್ಸ್‌ vs ಯು.ಪಿ. ಯೋಧಾ, ರಾತ್ರಿ 7.30ಕ್ಕೆ
ಗುಜರಾತ್‌ ಫಾರ್ಚೂನ್‌ಜಯಂಟ್ಸ್‌ vs ತಮಿಳ್‌ ತಲೈವಾಸ್‌, ರಾತ್ರಿ 8.30ಕ್ಕೆ

ತಾಣ: ತಾವು ದೇವಿಲಾಲ್‌ ಕ್ರೀಡಾ ಸಂಕೀರ್ಣ ಪಂಚಕುಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌