ಆ್ಯಪ್ನಗರ

ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿ ದಬಾಂಗ್ ಡೆಲ್ಲಿ vs ಬೆಂಗಾಲ್ ವಾರಿಯರ್ಸ್

ಪ್ರೊ ಕಬಡ್ಡಿ ಲೀಗ್ 2019ನೇ ಸಾಲಿನ ಪಂದ್ಯಾವಳಿಯಲ್ಲಿ ಶನಿವಾರ ನಡೆಯಲಿರುವ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿದೆ.

Vijaya Karnataka Web 19 Oct 2019, 11:30 am
ಅಹಮದಾಬಾದ್: ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು ಬೆಂಗಾಲ್ ವಾರಿಯರ್ಸ್ ಸವಾಲನ್ನು ಎದುರಿಸಲಿದೆ.
Vijaya Karnataka Web delhi-vs-bengal-pkl-final


ಅಕ್ಟೋಬರ್ 19 ಶನಿವಾರ ರಾತ್ರಿ 7.30ಕ್ಕೆ ಅಹಮದಾಬಾದ್‌ನ ಎಕಾ ಅರೆನಾ ಟ್ರಾನ್ಸ್‌ಸ್ಟೇಡಿಯಾ ಮೈದಾನದಲ್ಲಿ ನಡೆಯಲಿರುವ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿಯಲ್ಲಿ ಇತ್ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.

ಬುಲ್ಸ್, ಮುಂಬಾ ಫೈನಲ್ ಕನಸು ಭಗ್ನ; ಡೆಲ್ಲಿ vs ಬೆಂಗಾಲ್ ಫೈನಲ್

ಇದೇ ಮೊದಲ ಬಾರಿಗೆ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಫೈನಲ್ ಪ್ರವೇಶಿಸಿದೆ. ಹಾಗಾಗಿ ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಸೆಮಿಫೈನಲ್ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವನ್ನು ಅಧಿಕಾರಯುತವಾಗಿ ಮಣಿಸಿರುವ ದಬಾಂಗ್ ಡೆಲ್ಲಿ ಅದೇ ಶ್ರೇಷ್ಠ ಫಾರ್ಮ್ ಮುಂದುವರಿಸುವ ಇರಾದೆಯಲ್ಲಿದೆ. ಇನ್ನೊಂದೆಡೆ ಪ್ರಶಸ್ತಿ ಫೇವರಿಟ್ ಯು ಮುಂಬಾ ಹಿಮ್ಮೆಟ್ಟಿಸಿರುವ ಬೆಂಗಾಲ್ ವಾರಿಯರ್ಸ್ ಪ್ರಶಸ್ತಿ ಕದನಕ್ಕೆ ಲಗ್ಗೆಯಿಟ್ಟಿದೆ.

ಕೊಹ್ಲಿ ಸೇರಿದಂತೆ 3 ವಿಕೆಟ್ ಪತನ; ಸಂಕಷ್ಟದಲ್ಲಿ ಭಾರತ

132 ಲೀಗ್ ಪಂದ್ಯಗಳ ವೇಳೆಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿರುವ ಡೆಲ್ಲಿ ಹಾಗೂ ಬೆಂಗಾಲ್ ತಂಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಚೊಚ್ಚಲ ಪ್ರಶಸ್ತಿಗಾಗಿ ಸಣಸಲಿದೆ.

ನವೀನ್ ಕುಮಾರ್ ದಬಾಂಗ್ ಡೆಲ್ಲಿ ಪಾಲಿಗೆ ಟ್ರಂಪ್ ಕಾರ್ಡ್ ಆಗಿದ್ದಾರೆ. ಸತತವಾಗಿ 20ನೇ ಬಾರಿಗೆ ಸೂಪರ್ 10 ರೇಡಿಂಗ್ ಅಂಕಗಳನ್ನು ದಾಖಲಿಸಿರುವ ನವೀನ್ ಮಗದೊಮ್ಮೆ ಮಿಂಚಿದರೆ ಡೆಲ್ಲಿ ಪಾಲಿಗೆ ಗೆಲುವು ಸುಲಭವಾಗಲಿದೆ. ನವೀನ್ ಈಗಾಗಲೇ 283 ರೇಡ್ ಅಂಕಗಳನ್ನು ಕಲೆ ಹಾಕಿದ್ದು, 300ರ ಗಡಿ ಸಮೀಪದಲ್ಲಿದ್ದಾರೆ.

ಅತ್ತ ಬೆಂಗಾಲ್ ಪರ ಮಣಿಂದರ್ ಸಿಂಗ್ ಬೆಸ್ಟ್ ರೇಡರ್ ಎನಿಸಿದ್ದಾರೆ. ಇದುವರೆಗೆ ಆಡಿರುವ 20 ಪಂದ್ಯಗಳಲ್ಲಿ 205 ರೇಡಿಂಗ್ ಅಂಕಗಳನ್ನು ದಾಖಲಿಸಿದ್ದಾರೆ. ಆದರೆ ಗಾಯದ ಸಮಸ್ಯೆಗೆ ಸಿಲುಕಿರುವ ಮಣಿಂದರ್ ಫೈನಲ್ ಆಡುವರೇ ಎಂಬುದು ಸಂಶಯವೆನಿಸಿದೆ.

ದ.ಆಫ್ರಿಕಾ ಬದಲಿ ನಾಯಕನಿಂದ ಟಾಸ್ ಅದೃಷ್ಟ ಪರೀಕ್ಷೆ; ಆದರೂ ಕೈಕೊಟ್ಟ ಲಕ್!

ಡೆಲ್ಲಿ ಸ್ಟಾರ್ ಆಟಗಾರರು:
ನವೀನ್ ಕುಮಾರ್
ವಿಶಾಲ್ ಮಾನೆ
ರವೀಂದ್ರ ಪಹಲ್

ಬೆಂಗಾಲ್ ಸ್ಟಾರ್ ಆಟಗಾರರು:
ಕೆ.ಪ್ರಪಂಜನ್
ಜೀವಕುಮಾರ್
ಸುಕೇಶ್ ಹೆಗ್ಡೆ

ಪ್ರಶಸ್ತಿ ಮೊತ್ತ:
ಚಾಂಪಿಯನ್ ತಂಡ: 3 ಕೋಟಿ
ರನ್ನರ್ ಅಪ್: 2 ಕೋಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌