ಆ್ಯಪ್ನಗರ

ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದ ತೆಲುಗು ಟೈಟನ್ಸ್

ಪ್ರೊ ಕಬಡ್ಡಿ ಲೀಗ್ 2019ನೇ ಸಾಲಿನ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಡೆಲ್ಲಿಯಲ್ಲಿ ನಡೆಯುತ್ತಿರುವ ಆರನೇ ಚರಣದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ದ ತೆಲುಗು ಟೈಟನ್ಸ್ 24-21ರ ಅಂಕಗಳ ರೋಚಕ ಗೆಲುವು ದಾಖಲಿಸಿದೆ.

Vijaya Karnataka Web 24 Aug 2019, 10:26 pm
ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ 57ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದೆ.
Vijaya Karnataka Web jaipur-vs-titans


ಇಲ್ಲಿನ ತ್ಯಾಗರಾಜ್‌ ಕ್ರೀಡಾ ಸಂಕೀರ್ಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು 24-21ರ ಅಂಕಗಳಿಂದ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿತು.

ಪಂದ್ಯದ ಪ್ರಥಮಾರ್ಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಜೈಪುರ, 14-11ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿತು. ಆದರೆ ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ತೆಲುಗು ಟೈಟನ್ಸ್ ಭರ್ಜರಿ ತಿರುಗೇಟು ನೀಡುವ ಮೂಲಕ ಪಂದ್ಯದ ಫಲಿತಾಂಶವೇ ಬದಲಾಯಿತು.

ಕೊನೆಯ ಹಂತದಲ್ಲಿ ಜೈಪುರ ಮಾಡಿದ ತಪ್ಪುಗಳ ಪ್ರಯೋಜನ ಪಡೆದ ಟೈಟನ್ಸ್ ಗೆಲುವಿನತ್ತ ಹೆಜ್ಜೆಯಿಟ್ಟಿತು. ಅಂತಿಮವಾಗಿ ರೋಚಕ ಗೆಲುವು ದಾಖಲಿಸಿತು.

ಈ ಸೋಲಿನ ಹೊರತಾಗಿಯೂ ಆಡಿರುವ 10 ಪಂದ್ಯಗಳಲ್ಲಿ ಏಳು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು 37 ಅಂಕಗಳನ್ನು ಕಲೆ ಹಾಕಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನೊಂದೆಡೆ ಅಷ್ಟೇ ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿರುವ ತೆಲುಗು ಟೈಟನ್ಸ್, 23 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌