ಆ್ಯಪ್ನಗರ

ಮುಂಬಾಗೆ ಮಣಿದ ಗುಜರಾತ್; ಪ್ಯಾಂಥರ್ಸ್ ವಿರುದ್ಧ ವಾರಿಯರ್ಸ್‌ಗೆ ರೋಚಕ ಗೆಲುವು

ಪ್ರೊ ಕಬಡ್ಡಿ ಲೀಗ್ 2019ನೇ ಸಾಲಿನ ಕಬಡ್ಡಿ ಪಂದ್ಯಾವಳಿಯಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ಯು ಮುಂಬಾ ತಂಡವು ಗುಜರಾತ್ ಫಾರ್ಚೂನ್ ಜಯಂಟ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ರೋಚಕ ಗೆಲುವುಗಳನ್ನು ದಾಖಲಿಸಿದೆ.

Vijaya Karnataka Web 23 Sep 2019, 8:57 am
ಜೈಪುರ: ಆಲ್‌ರೌಂಡ್ ಪ್ರದರ್ಶನ ತೋರಿದ ಮಾಜಿ ಚಾಂಪಿಯನ್ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ 102ನೇ ಹಣಾಹಣಿಯಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ಜಯ ಗಳಿಸಿ ಪೂರ್ಣ ಐದು ಅಂಕಗಳೊಂದಿಗೆ ತನ್ನ ಪ್ಲೇ ಆಫ್ ಸಾಧ್ಯತೆಯನ್ನು ಭದ್ರಪಡಿಸಿಕೊಳ್ಳುವತ್ತ ದಾಪುಗಾಲಿಟ್ಟಿತು.
Vijaya Karnataka Web pkl-2019 -10


ಇಲ್ಲಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬಾ 31-25 ಅಂಕಗಳಿಂದ ಗುಜರಾತ್ ತಂಡಕ್ಕೆ ಸೋಲಿನ ಆಘಾತ ನೀಡಿತು. ಇದರೊಂದಿಗೆ ಮುಂಬಾ ತಂಡ ಒಟ್ಟಾರೆ 17 ಪಂದ್ಯಗಳಿಂದ 53 ಅಂಕಗಳನ್ನು ಕಲೆ ಹಾಕಿತು.

ಭಾರತ ವಿರುದ್ಧ ವಿಶಿಷ್ಟ ದಾಖಲೆ ಬರೆದ ದ.ಆಫ್ರಿಕಾ ಕ್ಯಾಪ್ಟನ್ ಕ್ವಿಂಟನ್ ಡಿ ಕಾಕ್

ಭಾರತ ವಿರುದ್ಧ ವಿಶಿಷ್ಟ ದಾಖಲೆ ಬರೆದ ದ.ಆಫ್ರಿಕಾ ಕ್ಯಾಪ್ಟನ್ ಕ್ವಿಂಟನ್ ಡಿ ಕಾಕ್


18 ಪಂದ್ಯಗಳನ್ನಾಡಿರುವ ಗುಜರಾತ್ 39 ಅಂಕ ಸಂಪಾದಿಲಷ್ಟೇ ಶಕ್ತಗೊಂಡಿದ್ದು, ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಸೂಪರ್ 10 ಜತೆಗೆ ಒಟ್ಟು 11 ಅಂಕ ಗಳಿಸಿದ ಅಭಿಷೇಕ್ ಸಿಂಗ್ ಮುಂಬಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸುರೇಂದರ್ ಸಿಂಗ್, ಹರೇಂದ್ರ ಕುಮಾರ್ ತಲಾ ಮೂರು ಅಂಕಗಳ ಕೊಡುಗೆ ನೀಡಿದರು. ಗುಜರಾತ್ ಪರ ರೋಹಿತ್ ಗುಲಿಯಾ 9 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರೆ, ಜಿಬಿ ಮೋರೆ 5 ಅಂಕಗಳ ಕಾಣಿಕೆ ನೀಡಿದರು.


ಭಾರತ v/s ದ. ಆಫ್ರಿಕಾ 3ನೇ ಟಿ20: ಧೋನಿ ದಾಖಲೆ ಸರಿಗಟ್ಟಿದ 'ಹಿಟ್‌ಮ್ಯಾನ್‌' ರೋಹಿತ್‌!

ಪ್ಯಾಂಥರ್ಸ್ ವಿರುದ್ದ ವಾರಿಯರ್ಸ್‌ಗೆ ಥ್ರಿಲ್ಲಿಂಗ್ ಗೆಲುವು...

ದಿನದ ಎರಡನೇ ಪಂದ್ಯದಲ್ಲಿ ಕಂಗೊಳಿಸಿದ ಬೆಂಗಾಲ್ ವಾರಿಯರ್ಸ್ 41-40 ಅಂಕಗಳಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಎರಡು ಬಾರಿ ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದ ಬೆಂಗಾಲ್ ಉಭಯ ಅವಧಿಗಳಲ್ಲೂ ಪಾರಮ್ಯ ಸಾಧಿಸಿತು. ವಾರಿಯರ್ಸ್ ಪರ ಮಣಿಂದರ್ ಸಿಂಗ್ 19 ಅಂಕ ಗಳಿಸಿ ತಂಡದ ಗೆಲುವಿನ ರೂವಾರಿಯೆನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌