ಆ್ಯಪ್ನಗರ

ಎರಡನೇ ಎಲಿಮಿನೇಟರ್‌ನಲ್ಲಿ ಹರಿಯಾಣ ಬಗ್ಗುಬಡಿದ ಮುಂಬಾ ಸೆಮೀಸ್‌ಗೆ ಲಗ್ಗೆ

ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಸೋಮವಾರ ನಡೆದ ದ್ವಿತೀಯ ಎಲಿಮಿನೇಟರ್‌ನಲ್ಲಿ ಹರಿಯಾಣ ಸ್ಟೀಲರ್ಸ್ ಮಣಿಸಿರುವ ಯು ಮುಂಬಾ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಬುಧವಾರ ನಡೆಯಲಿರುವ ದ್ವಿತೀಯ ಸೆಮಿಫೈನಲ್‌ನಲ್ಲಿ ಬೆಂಗಾಲ್ ವಾರಿಯರ್ಸ್ ಸವಾಲನ್ನು ಎದುರಿಸಲಿದ್ದಾರೆ.

Vijaya Karnataka Web 15 Oct 2019, 8:39 am
ಅಹಮಾದಾಬಾದ್: ಪ್ರೊ ಕಬಡ್ಡಿ ಲೀಗ್ 2019ನೇ ಸಾಲಿನ ಟೂರ್ನಮೆಂಟ್‌ ರೋಚಕ ಹಂತವನ್ನು ತಲುಪಿದ್ದು, ಸೋಮವಾರ ನಡೆದ ಎರಡನೇ ಎಲಿಮಿನೇಟರ್‌ನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಬಾರಿಸಿರುವ ಯು ಮುಂಬಾ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
Vijaya Karnataka Web pkl-2019 -20


ಅಹಮದಾಬಾದ್‌ನ ಎಕಾ ಅರೆನಾ ಟ್ರಾನ್ಸ್‌ಸ್ಟಾಡಿಯಾ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಮುಖಾಮುಖಿಯಲ್ಲಿ ಯು ಮುಂಬಾ ತಂಡವು 46-38ರ ಅಂತರದಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಮೇಲುಗೈ ಸಾಧಿಸಿತು.

ಪ್ರೊ ಕಬಡ್ಡಿ ಲೀಗ್‌ 2019: ಯೋಧಾ ಕದನ ಗೆದ್ದ ಬೆಂಗಳೂರು ಬುಲ್ಸ್‌ ಸೆಮಿಫೈನಲ್‌ಗೆ

ಇದರೊಂದಿಗೆ ಎಲಿಮಿನೇಟರ್‌ನಲ್ಲಿ ಸೋಲನುಭವಿಸಿರುವ ಹರಿಯಾಣ ಸ್ಟೀಲರ್ಸ್ ಕನಸು ಭಗ್ನಗೊಂಡಿದೆ.

ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮುಂಬಾ ಹಾಗೂ ಹರಿಯಾಣ ತಂಡಗಳು ಅಂಕಪಟ್ಟಿಯಲ್ಲಿ ಅನುಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಪಡೆದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿತು. ಇದೀಗ ಕ್ವಾರ್ಟರ್ ಮಹತ್ವ ಪಡೆದ ಎರಡನೇ ಎಲಿಮಿನೇಟರ್‌ನಲ್ಲಿ ಯು ಮುಂಬಾ ಜಯಭೇರಿ ಬಾರಿಸಿದೆ.

ಪ್ಲೇ ಆಫ್ ವೇಳಾಪಟ್ಟಿ ಇಂತಿದೆ

ಯು ಮುಂಬಾ ಪರ ಭರ್ಜರಿ ಪ್ರದರ್ಶನ ನೀಡಿದ ಅಭಿಷೇಕ್ ಸಿಂಗ್ ಹಾಗೂ ಅರ್ಜುನ್ ದೆಶ್ವಾಲ್ ಗೆಲುವಿನ ರೂವಾರಿ ಎನಿಸಿಕೊಂಡರು. ಅಭಿಷೇಕ್ 16 ಹಾಗೂ ಅರ್ಜುನ್ 15 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಹರಿಯಾಣ ಪರ ವಿಕಾಸ್ ಕಂಡೋಲಾ 13 ಅಂಕ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇದೀಗ ಬುಧವಾರ ನಡೆಯಲಿರುವ ದ್ವಿತೀಯ ಸೆಮಿಫೈನಲ್ ಮುಖಾಮುಖಿಯಲ್ಲಿ ಯು ಮುಂಬಾ ತಂಡವು ಬೆಂಗಾಲ್ ವಾರಿಯರ್ಸ್ ಸವಾಲನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬೆಂಗಾಲ್ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದಿತ್ತು.

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಹಾಕಿ ಆಟಗಾರರ ದುರ್ಮರಣ

ಅತ್ತ ಮೊದಲ ಎಲಿಮಿನೇಟರ್‌ನಲ್ಲಿ ಯುಪಿ ಯೋಧಾ ವಿರುದ್ಧ 48-45 ಅಂಕಗಳ ಅಂತರದ ರೋಚಕ ಗೆಲುವು ದಾಖಲಿಸಿರುವ ಬೆಂಗಳೂರು ಬುಲ್ಸ್, ಬುಧವಾರದಂದೇ ನಡೆಯಲಿರುವ ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್ ಡೆಲ್ಲಿ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌