ಆ್ಯಪ್ನಗರ

ಬೆಳ್ಳಿ ಪದಕದಿಂದ ಇನ್ನೆಲ್ಲವೂ ಬದಲಾಗಲಿದೆ: ಸಿಂಧೂ

ಈ ಪದಕದಿಂದ ಎಲ್ಲವೂ ಬದಲಾಗಲಿದೆ. ಈ ಖುಷಿಯನ್ನು ಸಂಭ್ರಮಿಸಬೇಕು ಎಂದು ಸಿಂಧೂ ಗೆಲುವಿನ ನಗೆ ಬೀರಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 20 Aug 2016, 10:18 am
ರಿಯೊ ಡಿ ಜನೈರೊ: 'ಏನು ಹೇಳಲಿ?' ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದೇನೆ, ಚೆನ್ನಾಗಿ ಆಡಿದ್ದೇನೆ, ಅದ್ಭುತವಾದ ಮ್ಯಾಚ್‌, ನಾನಿನ್ನು ಒಲಿಪಿಂಕ್‌ ಬೆಳ್ಳಿ ಪದಕ ವಿಜೇತೆ,'ಎಂದು ದೇಶದ ಹೆಮ್ಮೆಯ ಪುತ್ರಿ ಪಿ.ವಿ ಸಿಂಧೂ ಸಂಭ್ರಮ ಹಂಚಿಕೊಂಡಿದ್ದಾರೆ.
Vijaya Karnataka Web i understand things will be very different from now on pv sindhu
ಬೆಳ್ಳಿ ಪದಕದಿಂದ ಇನ್ನೆಲ್ಲವೂ ಬದಲಾಗಲಿದೆ: ಸಿಂಧೂ


ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಒಲಿಯಲಿಲ್ಲವಾದರೂ ಅವರು ಗೆದ್ದ ಬೆಳ್ಳಿಯ ಪದಕ ಚಿನ್ನಕ್ಕಿಂತಲೂ ಮಿಗಿಲಾದ ಸಾಧನೆ. ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಸೋತರೂ ದೇಶಕ್ಕೆ ರಜತ ಪದಕ ಗೆದ್ದುಕೊಟ್ಟ ಐತಿಹಾಸಿಕ ಸಂಭ್ರಮಕ್ಕೆ ಸಿಂಧೂ ಸಾಕ್ಷಿಯಾದರು.

'ಅಬ್ಬಾ ಒಂದು ರೀತಿಯ ನಿರಾಳ. ಈ ಪದಕದಿಂದ ಎಲ್ಲವೂ ಬದಲಾಗಲಿದೆ. ಈ ಖುಷಿಯನ್ನು ಸಂಭ್ರಮಿಸಬೇಕು,'ಎಂದು ಸಿಂಧೂ ಗೆಲುವಿನ ನಗೆ ಬೀರಿದರು.

ರಿಯೊದಲ್ಲಿ ಭಾರತ ಇಬ್ಬರು ಮಹಿಳೆಯರಿಗೆ ಪದಕ ದೊರೆತಿದೆ. ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದೀರಿ, ನಿಮ್ಮ ಜವಾಬ್ದಾರಿ ಹೆಚ್ಚಿದೆ ಅಲ್ವೇ? ಎಂದು ಅವರನ್ನು ಪ್ರಶ್ನಿಸಿದಾಗ, ' ಹೌದು ಇನ್ನು ಮುಂದೆ ಪರಿಸ್ಥಿತಿ ಬದಲಾಗಲಿದೆ. ಆ ದಿನ ಸಾಕ್ಷಿ ರೆಸ್ಲಿಂಗ್‌ನಲ್ಲಿ ಪದಕ ಪಡೆದರು. ಕೆಲವೇ ಅಂಕಗಳಿಂದ ಹಲವರಿಗೆ ಪದಕ ಕೈತಪ್ಪಿದೆ. ಪದಕ ಗೆಲ್ಲುವ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೆ. ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಇನ್ನು ನನ್ನ ಜೀವನ ಬದಲಾಗಲಿದೆ. ಅದೀಗಾಗಲೇ ನಮ್ಮ ಅನುಭವಕ್ಕೂ ಬಂದಿದೆ. ಇನ್ನು ನನ್ನ ಹೆಸರಿಗೆ ಒಲಿಂಪಿಕ್‌ ಪದಕ ವಿಜೇತ ಎಂಬ ಹಣೆಪಟ್ಟಿ ಸೇರಲಿದೆ,'ಎಂದು ಖುಷಿ ಹಂಚಿಕೊಂಡಿದ್ದಾರೆ.

ಕ್ರೀಡಾ ಸ್ಫೂರ್ತಿ ಮೆರೆದ ಸಿಂಧೂ:

ವಿಶ್ವದ ನಂ.1 ತಾರೆ ಕ್ಯಾರೊಲಿನಾ ಮರಿನ್‌ ವಿರುದ್ಧ ಫೈನಲ್‌ ಪಂದ್ಯ ಆಡಿದ ಸಿಂಧೂ ರೋಚಕ ಆಟಕ್ಕೆ ಕಿಚ್ಚು ಹತ್ತಿಸಿದರು. ಪಂದ್ಯ ಗೆಲ್ಲುತ್ತಿದ್ದಂತೆ ಕ್ಯಾರೊಲಿನಾ ಮರಿನ್‌ ಅಂಗಣದಲ್ಲಿ ಮಲಗಿ ಬಿಕ್ಕಿ ಬಿಕ್ಕಿ ಅತ್ತು ಆನಂದಭಾಷ್ಪ ಸುರಿಸಿದರೆ, ಸಿಂಧೂ ಮುಖದಲ್ಲಿ ಚಿನ್ನ ಗೆಲ್ಲಲಾಗದ ನಿರಾಸೆ ಎದ್ದು ಕಾಣುತ್ತಿತ್ತು. ನಿರಾಸೆಯ ಮಧ್ಯೆಯೇ ಎದುರಾಳಿಯನ್ನು ಬಿಗಿದಪ್ಪಿ ಅಭಿನಂದಿಸಿದ್ದು ಸಿಂಧೂ ಅವರ ಕ್ರೀಡಾಸೂರ್ತಿಗೆ ಸಾಕ್ಷಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌