ಆ್ಯಪ್ನಗರ

ಚಿನ್ನದ ಸರದಾರ, ಜಾವೆಲಿನ್‌ ಎಸೆತಗಾರ ನೀರಜ್‌ಗೆ ಶಹಬ್ಬಾಸ್ ಎಂದ ಮೋದಿ

ನೀರಜ್ ಚೋಪ್ರಾ ಅವರ ಗೆಲುವಿಗೆ ಶುಭ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಸಂದೇಶ ರವಾನಿಸಿದ್ದಾರೆ. ದಿಟ್ಟ ಪ್ರದರ್ಶನ ನೀಡಿರುವ ಯುವ ಯೋಧ ನೀರಜ್‌ ಈಗ ದೇಶದ ಕಣ್ಮಣಿಯಾಗಿದ್ದಾರೆ.

Vijaya Karnataka Web 7 Aug 2021, 8:13 pm
ಹೊಸದಿಲ್ಲಿ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Vijaya Karnataka Web ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ


ಶನಿವಾರ ಮಧ್ಯಾಹ್ನ ನಡೆದ ಜಾವೆಲಿನ್‌ ಎಸೆತದ ಫೈನಲ್‌ನಲ್ಲಿ ನೀರಜ್‌ ಚೋಪ್ರಾ 87.58 ಮೀಟರ್‌ ಜಾವೆಲಿನ್ ಎಸೆದು ಚಿನ್ನದ ಪದಕ ದಕ್ಕಿಸಿಕೊಂಡರು.

ನೀರಜ್ ಚೋಪ್ರಾ ಅವರ ಗೆಲುವಿಗೆ ಶುಭ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಸಂದೇಶ ರವಾನಿಸಿದ್ದಾರೆ.


ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಾಣವಾಗಿದೆ. ನೀರಜ್‌ ಚೋಪ್ರಾ ಇಂದು ಮಾಡಿರುವ ಈ ಸಾಧನೆಯನ್ನು ಸದಾ ಕಾಲ ನೆನಪಿಸಿಕೊಳ್ಳುವಂತಾಗಿದೆ. ಯುವ ನೀರಜ್‌ ಅಮೋಘ ಪ್ರದರ್ಶನ ನೀಡಿದ್ದಾರೆ. ಅತ್ಯಂತ ವೃತ್ತಿಪರತೆ ಹಾಗೂ ದಿಟ್ಟ ಮನಸ್ಸಿನಿಂದ ಆಟ ಪ್ರದರ್ಶಿಸಿದ್ದಾರೆ. ಚಿನ್ನದ ಪದಕ ಗೆದ್ದ ಧೀರನಿಗೆ ಕಂಗ್ರಾಟ್ಸ್‌...

ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವೀಟ್‌ ಮೂಲಕ ನೀರಜ್‌ ಚೋಪ್ರಾ ಬೆನ್ನು ತಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌