ಆ್ಯಪ್ನಗರ

ಅರ್ಜೆಂಟೀನಾ ವಿರುದ್ಧ ಗೆದ್ದು ಕ್ವಾರ್ಟರ್‌ ಫೈನಲ್ಸ್‌ ತಲುಪಿದ ಭಾರತ ಹಾಕಿ ತಂಡ!

ವರುಣ್‌ ಕುಮಾರ್‌, ವಿವೇಕ್‌ ಸಾಗರ್‌ ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಮೂರು ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ 3-1 ಅಂತರದಲ್ಲಿ ಅರ್ಜೆಟೀನಾ ತಂಡವನ್ನು ಮಣಿಸಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಮಾಡಿದೆ.

Vijaya Karnataka Web 29 Jul 2021, 11:44 am

ಹೈಲೈಟ್ಸ್‌:

  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ.
  • ಹಾಲಿ ಚಾಂಪಿಯನ್ಸ್‌ ಅರ್ಜೇಟೀನಾ ವಿರುದ್ಧ 3-1 ಅಂತರದಲ್ಲಿ ಭಾರತಕ್ಕೆ ಗೆಲುವು.
  • ಗುಂಪು ಹಂತದಲ್ಲಿ ಭಾರತ ಒಟ್ಟು ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web India Hockey
ಭಾರತ ಹಾಕಿ ತಂಡ (ಚಿತ್ರ: ಹಾಕಿ ಇಂಡಿಯಾ ಟ್ವಿಟರ್‌)
ಟೋಕಿಯೋ (ಜಪಾನ್‌): ಭಾರತದ ಪುರುಷರ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಹಾಲಿ ಒಲಿಂಪಿಕ್ಸ್ ಚಾಂಪಿಯನ್ಸ್‌ ಅರ್ಜೆಂಟೀನಾ ವಿರುದ್ಧ 3-1 ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಮಾಡಿದೆ. ಆ ಮೂಲಕ ಭಾರತಕ್ಕೆ ಹಾಕಿ ವಿಭಾಗದಿಂದ ಪದಕ ಗೆದ್ದು ಕೊಡುವ ಭರವಸೆ ಮೂಡಿಸಿದೆ.
ಗುರುವಾರ ನಡೆದಿದ್ದ 'ಎ' ಗುಂಪಿನ ನಾಲ್ಕನೇ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ಹಾಗೂ ಅರ್ಜೆಂಟೀನಾ ತಂಡಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದರೆ, ಮೊದಲ ಹಾಗೂ ಎರಡನೇ ಕ್ವಾರ್ಟರ್‌ಗಳ ಅಂತ್ಯಕ್ಕೆ ಗೋಲಿನ ಖಾತೆ ತೆರೆಯುವಲ್ಲಿ ಉಭಯ ತಂಡಗಳು ವಿಫಲವಾದವು. ಹಾಗಾಗಿ, ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಫಾವರ್ಡ್‌ ಆಟಗಾರರ ಮೇಲೆ ಸಾಕಷ್ಟು ಒತ್ತಡ ಬಿದ್ದಿತ್ತು.

ಈ ವೇಳೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅನ್ನು ಸದುಪಯೋಗಪಡಿಸಿಕೊಂಡ ವರುಣ್‌ ಕುಮಾರ್‌, ಭಾರತಕ್ಕೆ ಗೋಲಿನ ಖಾತೆ ತೆರೆದರು. ಇದರ ಜತೆಗೆ ಮೂರನೇ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಭಾರತಕ್ಕೆ ಮತ್ತೊಂದು ಗೋಲು ಸಿಡಿಸುವ ಅವಕಾಶ ಲಭ್ಯವಾಗಿತ್ತು. ಆದರೆ, ಅರ್ಜೆಂಟೀನಾ ಗೋಲ್‌ ಕೀಪರ್‌ ಜ್ಯೂನ್‌ ಮ್ಯಾನ್ಯೂಲ್‌ ಗೋಲನ್ನು ತಡೆದು ಭಾರತಕ್ಕೆ ನಿರಾಸೆ ಮೂಡಿಸಿದರು.

Tokyo Olympics: ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶಿಸಿದ ಪಿವಿ ಸಿಂಧೂ!

ನಂತರ, ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ಪೈಪೋಟಿಯನ್ನು ಮೆಟ್ಟಿನಿಂತ ಅರ್ಜೆಂಟೀನಾ, ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಹಾಲಿ ಒಲಿಂಪಿಕ್ಸ್‌ ಚಾಂಪಿಯನ್ ಪಂದ್ಯದಲ್ಲಿ 1-1 ಸಮಬಲ ಸಾಧಿಸಿತು. ಇನ್ನೇನು ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ, ಅದ್ಭುತ ಕೈ ಚಳಕ ತೋರಿದ ವಿವೇಕ್‌ ಸಾಗರ್‌ ನಿರ್ಣಾಯಕ ಸಮಯದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಇದಾದ ಕೆಲವೇ ನಿಮಿಷಗಳಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಅವರು ತಮ್ಮ ಮೊದಲನೇ ಗೋಲು ಗಳಿಸಿ ಭಾರತಕ್ಕೆ 3-1 ಅಂತರದ ಗೆಲುವಿಗೆ ಕೈ ಜೋಡಿಸಿದರು. ಆ ಮೂಲಕ ಭಾರತ ತಂಡ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಮಾಡಿತು.

ಟೋಕಿಯೋ ಒಲಿಂಪಿಕ್ಸ್‌: ಮೂರನೇ ಸುತ್ತಿಗೆ ಕಾಲಿಟ್ಟ ಪೂಜಾ ರಾಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌