ಆ್ಯಪ್ನಗರ

ರಿಯೊ: ಪತ್ರಕರ್ತರಿದ್ದ ಬಸ್‌ ಮೇಲೆ ಗುಂಡಿನ ದಾಳಿ

ರಿಯೊ ಕ್ರೀಡಾಕೂಟಕ್ಕೆ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆಸಿದೆ.

ಟೈಮ್ಸ್ ಆಫ್ ಇಂಡಿಯಾ 10 Aug 2016, 10:08 am
ರಿಯೊ ಡಿ ಜನೈರೊ: ರಿಯೊ ಕ್ರೀಡಾಕೂಟಕ್ಕೆ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಸಾವು, ಗಂಭೀರ ಸ್ವರೂಪದ ನೋವು ಸಂಭವಿಸಿಲ್ಲ.
Vijaya Karnataka Web rio games bus hit by gunfire no one seriously hurt witnesses
ರಿಯೊ: ಪತ್ರಕರ್ತರಿದ್ದ ಬಸ್‌ ಮೇಲೆ ಗುಂಡಿನ ದಾಳಿ


ಬಾಸ್ಕೆಟ್‌ಬಾಲ್‌ ಕ್ರೀಡಾಂಗಣದಿಂದ ಒಲಿಪಿಂಕ್ಸ್‌ನ ಮುಖ್ಯ ಕ್ರೀಡಾ ಕೇಂದ್ರದ ಕಡೆಗೆ ತೆರಳುತ್ತಿದ್ದ ಬಸ್‌ ಮೇಲೆ ಎರಡು ಗುಂಡು ಹಾರಿಸಲಾಗಿದೆ. ಕಿಟಕಿ ಗಾಜು ಒಡೆದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

'ಗುಂಡಿನ ಶಬ್ದ ಕೇಳಿಸಿತು. ಗುಂಡು ತಗುಲುವ ಅಪಾಯವಿತ್ತು,'ಎಂದು ರಿಯೊ ಬಾಸ್ಕೆಟ್‌ ಬಾಲ್‌ ಪಬ್ಲಿಕೇಷನ್‌ನಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ವಾಯು ಪಡೆ ಕ್ಯಾಪ್ಟನ್‌ ಶೆರ್ಲ್‌ ಲೀ ಮೈಕಲ್‌ಸನ್‌ ಹೇಳಿದ್ದಾರೆ. ಗುಂಡಿನ ದಾಳಿ ನಂತರ ಬ್ರೆಜಿಲ್‌ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌