ಆ್ಯಪ್ನಗರ

ಉದ್ದೀಪನಾ ಮದ್ದು: ನರಸಿಂಗ್‌ ಯಾದವ್‌ಗೆ 4 ವರ್ಷ ನಿಷೇಧ

ಕುಸ್ತಿಪಟು ನರಸಿಂಗ್‌ ಯಾದವ್‌ ಅವರಿಗೆ ವಾಡಾ ನಾಲ್ಕು ವರ್ಷಗಳ ನಿಷೇಧ ಹೇರಿದೆ.

ಟೈಮ್ಸ್ ಆಫ್ ಇಂಡಿಯಾ 19 Aug 2016, 10:58 am
ರಿಯೊ: ಉದ್ದೀಪನಾ ಮದ್ದು ಸೇವನೆ ವಿವಾದಕ್ಕೆ ಸಿಲುಕಿರುವ ಕುಸ್ತಿಪಟು ನರಸಿಂಗ್‌ ಯಾದವ್‌ ಅವರಿಗೆ ಕೋರ್ಟ್‌ ಆಫ್‌ ಆರ್ಬಿಟ್ರೇಷನ್‌ ಫಾರ್‌ ಸ್ಪೋರ್ಟ್ಸ್ (ಸಿಎಎಸ್) ನಾಲ್ಕು ವರ್ಷಗಳ ನಿಷೇಧ ಹೇರಿದ್ದು, ಈ ಒಲಿಂಪಿಕ್ಸ್‌ನಲ್ಲಿ ಆಡುವ ಅವರ ಕನಸು ಕೊನೆಗೊಂಡಿದೆ.
Vijaya Karnataka Web rio games narsingh yadavs oympic dream over after 4 year doping suspension
ಉದ್ದೀಪನಾ ಮದ್ದು: ನರಸಿಂಗ್‌ ಯಾದವ್‌ಗೆ 4 ವರ್ಷ ನಿಷೇಧ


ಈ ಮೊದಲು ಭಾರತೀಯ ಉದ್ದೀಪನಾ ಮದ್ದು ಘಟಕ (ನಾಡಾ) ವಿಚಾರಣೆ ನಡೆಸಿ ನರಸಿಂಗ್‌ ಅವರನ್ನು ಖುಲಾಸೆಗೊಳಿಸಿತ್ತು. ಒಲಿಂಪಿಕ್ಸ್‌ನಲ್ಲಿ ಆಡಲೆಂದು ಬ್ರೆಜಿಲ್‌ಗೆ ಹೋದ ಬಳಿಕ ನಾಡಾ ನೀಡಿದ್ದ ತೀರ್ಪು ಪ್ರಶ್ನಿಸಿ ಅಂತಾರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ (ವಾಡಾ)ವು ಗುರುವಾರ ವಿಚಾರಣೆ ನಡೆಸಿತ್ತು.

ನರಸಿಂಗ್‌ ಉದ್ದೇಶಪೂರ್ವಕವಾಗಿ ಉದ್ದೀಪನಾ ಮದ್ದು ಸೇವಿಸಿಲ್ಲ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸಿಎಎಸ್‌ ಹೇಳಿದೆ.

ಅವರನ್ನು ಕ್ರೀಡಾಗ್ರಾಮದಿಂದ ಬಲವಂತವಾಗಿ ತೆರವುಗೊಳಿಸಲಾಗಿದ್ದು, ಮಾಧ್ಯಮದವರ ಕಣ್ಣಿಗೆ ಬೀಳದಂತೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌