ಆ್ಯಪ್ನಗರ

ರಿಯೋ ಒಲಿಂಪಿಕ್ಸ್: ಕೈ ತಪ್ಪಿತು ಕೊನೆ ಪದಕದ 'ಯೋಗ'

ಕುಸ್ತಿಪಟು ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲಿಯೇ ಸೋತಿದ್ದು, ಭಾರತದ ಮತ್ತೊಂದು ಪದಕದ ಆಸೆ ಕಮರಿ ಹೋಗಿದೆ.

ಏಜೆನ್ಸೀಸ್ 21 Aug 2016, 6:11 pm
ರಿಯೋ ಡಿ ಜನೈರೋ: ಈಗಾಗಲೇ ಸಾಕ್ಷಿ ಹಾಗೂ ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು, ಭಾರತದ ಕೀರ್ತಿ ಪತಾಕೆ ಹಾರಿಸಿದ ಬೆನ್ನಲ್ಲೇ ಕುಸ್ತಿ ಪಟು ಯೋಗೇಶ್ವರ್ ದತ್ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಅವರು ಅರ್ಹತಾ ಸುತ್ತಿನಲ್ಲಿಯೇ ಮಂಗೋಲಿಯಾದ ಮಂಡಖ್ನರನ್ ವಿರುದ್ದ 0-3 ಅಂತರದಲ್ಲಿ ಸೋತಿದ್ದು, ಕೊನೆಯ ಪದಕದ ಆಸೆಯೂ ಕಮರಿ ಹೋಗಿದೆ.
Vijaya Karnataka Web rio olympics yogeshwar dutt loses qualifier
ರಿಯೋ ಒಲಿಂಪಿಕ್ಸ್: ಕೈ ತಪ್ಪಿತು ಕೊನೆ ಪದಕದ 'ಯೋಗ'


ನಾಳೆ ರಿಯೋ ಒಲಿಂಪಿಕ್ಸ್‌ಗೆ ತೆರೆ ಬೀಳಲಿದ್ದು, ಇಂದು ಯೋಗೇಶ್ವರ್ ಪುರುಷರ 65 ಕೆಜಿ ಫ್ರೀ ಸ್ಟೈಲ್ ಕುಸ್ತಿಯಾಡಿದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಯೋಗೇಶ್ವರ್ ಮೇಲೆ ಸಹಜವಾಗಿಯೇ ಹೆಚ್ಚಿನ ಭರವಸೆ ಇತ್ತು.

ಆರಂಭದಿಂದಲೂ ಭಾರತೀಯ ಪುರುಷ ಕುಸ್ತಿ ಪಟುಗಳು ಕಳಪೆ ಪ್ರದರ್ಶನ ನೀಡುತ್ತಿದ್ದು, ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ನರಸಿಂಗ್ ಯಾದವ್ ನಾಲ್ಕು ವರ್ಷ ನಿಷೇಧಕ್ಕೆ ಗುರಿಯಾಗಿ, ರಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿಯಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌