ಆ್ಯಪ್ನಗರ

ಚೆಸ್‌: ಅಧಿಬಾನ್‌ಗೆ ಜಂಟಿ 3ನೇ ಸ್ಥಾನ

ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಬಿ. ಅಧಿಬಾನ್‌ ಇಲ್ಲಿ ಮುಕ್ತಾಯಗೊಂಡ ಐಲ್‌ ಆಫ್‌ ಮ್ಯಾನ್‌ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಮೂರನೇ ಸ್ಥಾನದೊಂದಿಗೆ ಹೋರಾಟ ಕೊನೆಗೊಳಿಸಿದ್ದಾರೆ.

PTI 30 Oct 2018, 5:00 am
ಐಲ್‌ ಆಫ್‌ ಮ್ಯಾನ್‌ (ಯುಕೆ) :ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಬಿ. ಅಧಿಬಾನ್‌ ಇಲ್ಲಿ ಮುಕ್ತಾಯಗೊಂಡ ಐಲ್‌ ಆಫ್‌ ಮ್ಯಾನ್‌ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಮೂರನೇ ಸ್ಥಾನದೊಂದಿಗೆ ಹೋರಾಟ ಕೊನೆಗೊಳಿಸಿದ್ದಾರೆ.
Vijaya Karnataka Web adhiban beats adams to tie for third in isle of man chess
ಚೆಸ್‌: ಅಧಿಬಾನ್‌ಗೆ ಜಂಟಿ 3ನೇ ಸ್ಥಾನ


ಸೋಮವಾರ ನಡೆದ ಟೂರ್ನಿಯ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಅಧಿಬಾನ್‌ ಇಂಗ್ಲೆಂಡ್‌ನ ಮೈಕಲ್‌ ಆ್ಯಡಮ್ಸ್‌ ವಿರುದ್ಧ ಜಯ ಗಳಿಸಿ ಒಟ್ಟು 6.5 ಅಂಕದೊಂದಿಗೆ ಜಂಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಜರ್‌ಬೈಜಾನ್‌ನ ಅರ್ಕಾದಿಜ್‌ ನಾಯ್ಡಿಟ್ಚ್‌ ವಿರುದ್ಧ ಡ್ರಾ ಗಳಿಸಿದ ಪೋಲೆಂಡ್‌ನ ರಾಡೊಸ್ಲಾವ್‌ ವೊಜ್‌ತಾಸ್ಜೆಕ್‌ ಅವರು ಒಟ್ಟು 7 ಅಂಕದೊಂದಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಉಭಯ ಆಟಗಾರರು ತಲಾ 7 ಅಂಕ ಹೊಂದಿದ್ದರಿಂದ ಟೈ ಬ್ರೇಕರ್‌ನಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ ಪೋಲೆಂಡ್‌ ಆಟಗಾರ ಕೊನೆಗೂ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಅಂತಿಮ ಸುತ್ತಿನಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಚೀನಾದ ವಾಂಗ್‌ ಹೋಯ್‌ ವಿರುದ್ಧ ಡ್ರಾ ಮಾಡಿಕೊಂಡು ಒಟ್ಟು 6 ಅಂಕಕ್ಕೆ ತೃಪ್ತಿಪ್ಟಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌