ಆ್ಯಪ್ನಗರ

ಪದಕದ ಖಾತೆ ತೆರೆದ ಅನ್ನು, ಪಾರುಲ್‌

ಭರವಸೆಯ ಜಾವೆಲಿನ್‌ ಥ್ರೋ ಪಟು ಅನ್ನು ರಾಣಿ ಹಾಗೂ 5000 ಮೀ. ಓಟಗಾರ್ತಿ ಪಾರುಲ್‌ ಚೌಧರಿ ಇಲ್ಲಿನ ಖಲೀಫಾ ಸ್ಟೇಡಿಯಮ್‌ನಲ್ಲಿ ಭಾನುವಾರ ಆರಂಭಗೊಂಡ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದಾರೆ.

Vijaya Karnataka Web 22 Apr 2019, 5:00 am
ದೋಹಾ : ಭರವಸೆಯ ಜಾವೆಲಿನ್‌ ಥ್ರೋ ಪಟು ಅನ್ನು ರಾಣಿ ಹಾಗೂ 5000 ಮೀ. ಓಟಗಾರ್ತಿ ಪಾರುಲ್‌ ಚೌಧರಿ ಇಲ್ಲಿನ ಖಲೀಫಾ ಸ್ಟೇಡಿಯಮ್‌ನಲ್ಲಿ ಭಾನುವಾರ ಆರಂಭಗೊಂಡ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದಾರೆ.
Vijaya Karnataka Web annu parul open medal account
ಪದಕದ ಖಾತೆ ತೆರೆದ ಅನ್ನು, ಪಾರುಲ್‌

ಏತನ್ಮಧ್ಯೆ, ದುತೀ ಚಾಂದ್‌ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಸೆಮಿಫೈನಲ್ಸ್‌ಗೆ ಅರ್ಹತೆ ಗಳಿಸಿದರೆ, 400 ಮೀಟರ್‌ ಓಟಗಾರ್ತಿ ಹಿಮಾ ದಾಸ್‌ ಬೆನ್ನಿನ ಸ್ನಾಯು ಸೆಳೆತಕ್ಕೊಳಗಾಗಿ ಹೀಟ್ಸ್‌ ಹಂತದಲ್ಲೇ ಸ್ಪರ್ಧೆ ಮುಗಿಸಿದರು.
2017ರಲ್ಲಿ ಭುವನೇಶ್ವರದಲ್ಲಿ ನಡೆದ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ 26 ವರ್ಷದ ಅನ್ನು ರಾಣಿ 60.22 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ರಜತ ಪದಕ ಗೆದ್ದರೆ, ಚೀನಾದ ಲೂ ಹ್ಯೂಹ್ಯೂ ಚಿನ್ನದ ಪದಕಕ್ಕೆ (65.83 ಮೀ) ಕೊರಳೊಡ್ಡಿದರು.
ಇನ್ನು, 24 ವರ್ಷದ ಪಾರುಲ್‌ 5000 ಮೀ. ಓಟದಲ್ಲಿ 3ನೆಯವರಾಗಿ ಸ್ಪರ್ಧೆ ಮುಗಿಸಿ ಕಂಚು ಗೆದ್ದರು. ಭಾರತೀಯ ಓಟಗಾರ್ತಿ 15 ನಿಮಿಷ 36.03 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌