ರಾಂಚಿ : ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಸೋಮವಾರ ನಿಶ್ಚಿತಾರ್ಥ ಸಮಾರಂಭದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಮುಂದಿನ ವರ್ಷ ನವೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ನಿಶ್ಚಿತಾರ್ಥ ಸಮಾರಂಭದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾವಿ ದಂಪತಿ, ''ಒಲಿಂಪಿಕ್ ಅರ್ಹತಾ ಟೂರ್ನಿ ಸೇರಿದಂತೆ 2019 ಬಿಡುವಿಲ್ಲದ ವರ್ಷವಾಗಿದೆ. ಆದ್ದರಿಂದ ಮುಂದಿನ ವರ್ಷದ ನವೆಂಬರ್ನಲ್ಲಿ ವಿವಾಹವಾಗಲು ನಿರ್ಧರಿಸಿದ್ದೇವೆ,'' ಎಂದರು.
ವಿಶ್ವದ ಮಾಜಿ ನಂ.1 ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ದೀಪಿಕಾ, ಸದ್ಯ ವಿಶ್ವ ರಾರಯಂಕಿಂಗ್ನಲ್ಲಿ ಐದನೇ ಸ್ಥಾನಕ್ಕೆ ಜಾರಿದ್ದಾರೆ. ದೀಪಿಕಾ ವಿಶ್ವಕಪ್ ಫೈನಲ್ಸ್ನಲ್ಲಿ ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ್ದಾರೆ. ಆದರೆ, 2 ಬಾರಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ.