ಆ್ಯಪ್ನಗರ

ಭಾರತಕ್ಕೆ ಗೋಲ್ಡ್ ನಂ 11; ಐತಿಹಾಸಿಕ ಸ್ವರ್ಣ ಗೆದ್ದ ಸ್ವಪ್ನ

ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಭಾರತ 11ನೇ ಸ್ವರ್ಣ ಪದಕವನ್ನು ಬಾಚಿಕೊಂಡಿದೆ. ಏಷ್ಯನ್ ಕ್ರೀಡಾಕೂಟದ 11ನೇ ದಿನವಾದ ಮಂಗಳವಾರದಂದು ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನ ಬರ್ಮನ್ ಚಿನ್ನ ಗೆದ್ದ ಸಾಧನೆ ಮಾಡಿದರು.

Vijaya Karnataka Web 29 Aug 2018, 10:06 pm
ಹೊಸದಿಲ್ಲಿ: ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಭಾರತ 11ನೇ ಸ್ವರ್ಣ ಪದಕವನ್ನು ಬಾಚಿಕೊಂಡಿದೆ.
Vijaya Karnataka Web swapna-barman


ಏಷ್ಯನ್ ಕ್ರೀಡಾಕೂಟದ 11ನೇ ದಿನವಾದ ಮಂಗಳವಾರದಂದು ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನ ಬರ್ಮನ್ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.

ಇದು ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ದೇಶಕ್ಕೆ ದೊರಕಿರುವ ಚೊಚ್ಚಲ ಚಿನ್ನದ ಪದಕವಾಗಿದೆ.


ಹಾಗೆಯೇ 6000ಕ್ಕೂ ಹೆಚ್ಚು ಅಂಕಗಳನ್ನು ಕಲೆ ಹಾಕಿದ ಐದನೇ ಕ್ರೀಡಾಪಟು ಎಂಬ ಕೀರ್ತಿಗೂ ಪಾತ್ರವಾದರು.

ಕಳೆದ ಕೆಲವು ದಿನಗಳಿಂದ ದವಡೆ ನೋವಿನಿಂದ ಬಳಲುತ್ತಿರುವ ಬರ್ಮನ್, ಅಚಲ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಎರಡು ದಿನಗಳಲ್ಲಿ ನಡೆದ ಸ್ಪರ್ಧೆಯಲ್ಲಿ 21ರ ಹರೆಯದ ಬರ್ಮನ್ ಒಟ್ಟು 6026 ಅಂಕಗಳನ್ನು ಕಲೆ ಹಾಕಿದರು. ಹೈ ಜಂಪ್‌ ಹಾಗೂ ಜಾವೆಲಿನ್ ಎಸೆತದಲ್ಲಿ ಅನುಕ್ರಮವಾಗಿ 1003 ಹಾಗೂ 872 ಅಂಕಗಳನ್ನು ಕಲೆ ಹಾಕಿ ಗೆಲುವು ದಾಖಲಿಸಿದ ಸ್ವಪ್ನ ಶಾಟ್ ಫುಟ್ (707) ಹಾಗೂ ಲಾಗ್ ಜಂಪ್‌ನಲ್ಲಿ (865) ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ಇನ್ನು 100 ಮೀಟರ್‌ನಲ್ಲಿ 5ನೇ (981) ಹಾಗೂ 200 ಮೀಟರ್ (790) ಓಟದಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ದಿನ 11 ಅಂತ್ಯಕ್ಕೆ ಭಾರತದ ಪದಕ ಪಟ್ಟಿ ಇಂತಿದೆ:

ಚಿನ್ನ: 11
ಬೆಳ್ಳಿ: 20
ಕಂಚು: 23
ಒಟ್ಟು: 54

ಪದಕ ಬೇಟೆಯಲ್ಲಿ ಭಾರತದ ಸ್ಥಾನ: 9

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌