ಆ್ಯಪ್ನಗರ

ಎಟಿಕೆ ಎದುರು ಮಂಡಿಯೂರಿದ ಜೆಎಫ್‌ಸಿ

ಕೋಲ್ಕೊತಾ: ಮ್ಯಾನುಯೆಲ್‌ ಲಾನ್ಜರೋಟ್‌ (3, 33ನೇ ನಿಮಿಷ) ದಾಖಲಿಸಿದ 2 ಗೋಲ್‌ಗಳ ಸಹಾಯದಿಂದ ಅಟ್ಲೆಟಿಕೊ ಡಿ' ಕೋಲ್ಕೊತಾ (ಎಟಿಕೆ) ತಂಡ ಪ್ರಸಕ್ತ ಐಎಸ್‌ಎಲ್‌ನ ತನ್ನ 14ನೇ ಪಂದ್ಯದಲ್ಲಿ ಜಮ್ಷೆಡ್‌ಪುರ ಎಫ್‌ಸಿ ವಿರುದ್ಧ ರೋಚಕ ಗೆಲುವು ದಾಖಲಿಸಿದೆ.

Agencies 4 Feb 2019, 5:00 am
ಕೋಲ್ಕೊತಾ: ಮ್ಯಾನುಯೆಲ್‌ ಲಾನ್ಜರೋಟ್‌ (3, 33ನೇ ನಿಮಿಷ) ದಾಖಲಿಸಿದ 2 ಗೋಲ್‌ಗಳ ಸಹಾಯದಿಂದ ಅಟ್ಲೆಟಿಕೊ ಡಿ' ಕೋಲ್ಕೊತಾ (ಎಟಿಕೆ) ತಂಡ ಪ್ರಸಕ್ತ ಐಎಸ್‌ಎಲ್‌ನ ತನ್ನ 14ನೇ ಪಂದ್ಯದಲ್ಲಿ ಜಮ್ಷೆಡ್‌ಪುರ ಎಫ್‌ಸಿ ವಿರುದ್ಧ ರೋಚಕ ಗೆಲುವು ದಾಖಲಿಸಿದೆ.
Vijaya Karnataka Web atk beat jfc in isl
ಎಟಿಕೆ ಎದುರು ಮಂಡಿಯೂರಿದ ಜೆಎಫ್‌ಸಿ


ಇಲ್ಲಿನ ವಿವೇಕಾನಂದ ಯುವ ಭಾರತೀ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಎಟಿಕೆ 2-1 ಗೋಲ್‌ಗಳಿಂದ ಜೆಎಫ್‌ಸಿ ತಂಡವನ್ನು ಹಣಿದು 3 ಅಂಕ ತನ್ನದಾಗಿಸಿಕೊಂಡಿತು. ಇದರೊಂದಿಗೆ ಆಡಿದ 14 ಪಂದ್ಯಗಳಿಂದ ಎಟಿಕೆ 20 ಅಂಕ ಕಲೆಹಾಕಿದೆ. ಜಮ್ಷೆಡ್‌ಪುರ ಪರ ಮಾರಿಯೋ ಆರ್ಕಸ್‌ (82ನೇ ನಿ.) ಏಕೈಕ ಗೋಲ್‌ ಗಳಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ಲಾನ್ಜರೋಟ್‌ ನೆರವಿನಿಂದ ಪಂದ್ಯದ ಆರಂಭದಲ್ಲೇ ಖಾತೆ ತೆರೆದು 1-0 ಅಂತರದಲ್ಲಿ ಮುನ್ನಡೆ ಗಳಿಸಿದ ಎಟಿಕೆ ತಂಡಕ್ಕೆ 33ನೇ ನಿಮಿಷದಲ್ಲಿ ಲಾನ್ಜರೋಟ್‌ ಮತ್ತೊಂದು ಗೋಲ್‌ ದಾಖಲಿಸಿ ಮುನ್ನಡೆ ಹೆಚ್ಚಿಸಿದರು. ವಿರಾಮಕ್ಕೂ ಮುನ್ನ 2-0 ಮುನ್ನಡೆ ಪಡೆದ ಎಟಿಕೆ ದ್ವಿತೀಯಾರ್ಧದಲ್ಲಿ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌