ಆ್ಯಪ್ನಗರ

ಪ್ಲೇಆಫ್ಸ್‌ ಹಾದಿಯಲ್ಲಿ ಬೆಂಗಾಲ್‌ ವಾರಿಯರ್ಸ್‌

ರೇಡರ್‌ಗಳ ಭರ್ಜರಿ ಪ್ರದರ್ಶನದಿಂದ ಮೇಲುಗೈ ಪಡೆದ ಆತಿಥೇಯ ಬೆಂಗಾಲ್‌ ವಾರಿಯರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ನ 6ನೇ ಆವೃತ್ತಿಯ 122ನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ತಂಡವನ್ನು ಮಣಿಸಿ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Agencies 22 Dec 2018, 5:00 am
ಕೋಲ್ಕೊತಾ : ರೇಡರ್‌ಗಳ ಭರ್ಜರಿ ಪ್ರದರ್ಶನದಿಂದ ಮೇಲುಗೈ ಪಡೆದ ಆತಿಥೇಯ ಬೆಂಗಾಲ್‌ ವಾರಿಯರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ನ 6ನೇ ಆವೃತ್ತಿಯ 122ನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ತಂಡವನ್ನು ಮಣಿಸಿ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
Vijaya Karnataka Web bengal warriors beat tamil thalaivas 27 24
ಪ್ಲೇಆಫ್ಸ್‌ ಹಾದಿಯಲ್ಲಿ ಬೆಂಗಾಲ್‌ ವಾರಿಯರ್ಸ್‌


ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸಮಬಲದ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ವಾರಿಯರ್ಸ್‌ ಪಡೆ 27-24 ಅಂತರದಲ್ಲಿ ತಲೈವಾಸ್‌ ವಿರುದ್ಧ ರೋಚಕ ಗೆಲುವನ್ನು ದಕ್ಕಿಸಿಕೊಂಡಿತು.

ವಾರಿಯರ್ಸ್‌ ಪರ ಸ್ಟಾರ್‌ ಆಟಗಾರ ಜಾಂಗ್‌ ಕುನ್‌ ಲೀ ಒಟ್ಟಾರೆ 12 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಯುವ ರೇಡರ್‌ ಮಣಿಂದರ್‌ ಸಿಂಗ್‌ 7 ಅಂಕಗಳ ಅಮೂಲ್ಯ ಕೊಡುಗೆ ನೀಡಿದರು. ಡಿಫೆನ್ಸ್‌ ವಿಭಾಗದಲ್ಲಿ ಬಲ ತುಂಬಿದ ರಣ್‌ ಸಿಂಗ್‌ 4 ಅದ್ಭುತ ಟ್ಯಾಕಲ್‌ಗಳ ಮೂಲಕ ಎದುರಾಳಿ ರೇಡರ್‌ಗಳ ಆತ್ಮವಿಶ್ವಾಸ ಅಡಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌