ಆ್ಯಪ್ನಗರ

4ನೇ ಬಾರಿಗೆ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ ಬಾಚಿದ ರೊನಾಲ್ಡೊ

ಅಂತರಾಷ್ಟ್ರೀಯ ಫುಟ್ಬಾಲ್ ಫಡರೇಷನ್ ಸಂಸ್ಥೆ (ಫಿಫಾ) ಶ್ರೇಷ್ಠ ಆಟಗಾರನಿಗೆ ನೀಡಲಾಗುವ 'ಬ್ಯಾಲನ್ ಡಿಓರ್' ಪ್ರಶಸ್ತಿಗೆ ರಿಯಲ್ ಮ್ಯಾಡ್ರಿಡ್ ಮತ್ತು ಪೋರ್ಚುಗಲ್ ತಂಡದ ಸ್ಟಾರ್ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಪಾತ್ರವಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 10 Jan 2017, 8:54 pm
ಅಂತರಾಷ್ಟ್ರೀಯ ಫುಟ್ಬಾಲ್ ಫಡರೇಷನ್ ಸಂಸ್ಥೆ (ಫಿಫಾ) ಶ್ರೇಷ್ಠ ಆಟಗಾರನಿಗೆ ನೀಡಲಾಗುವ 'ಬ್ಯಾಲನ್ ಡಿಓರ್' ಪ್ರಶಸ್ತಿಗೆ ರಿಯಲ್ ಮ್ಯಾಡ್ರಿಡ್ ಮತ್ತು ಪೋರ್ಚುಗಲ್ ತಂಡದ ಸ್ಟಾರ್ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಪಾತ್ರವಾಗಿದ್ದಾರೆ.
Vijaya Karnataka Web cristiano ronaldo wins fifas player of the year award
4ನೇ ಬಾರಿಗೆ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ ಬಾಚಿದ ರೊನಾಲ್ಡೊ


ತಮ್ಮ ಫುಟ್ಬಾಲ್ ವೃತ್ತಿ ಜೀವನದಲ್ಲಿ ಇದು ನಾಲ್ಕನೇ ಬಾರಿಗೆ ರೊನಾಲ್ಡೊ ಅವರು ಶ್ರೇಷ್ಠ ಫುಟ್ಬಾಲ್ ಪ್ರಶಸ್ತಿಗೆ ಅರ್ಹವಾಗುತ್ತಿದ್ದಾರೆ. ಈ ಮೂಲಕ ಬಾರ್ಸಿಲೋನಾ ಹಾಗೂ ಅರ್ಜೆಂಟೀನಾದ ತಂಡದ ತಾರೆ ಲಿಯೊನೆಲ್ ಮೆಸ್ಸಿ ಅವರ ದಾಖಲೆ ಸರಿಗಟ್ಟಲು ಮತ್ತೊಂದು ಹೆಜ್ಜೆ ಹಾಕಿದ್ದಾರೆ.

31ರ ಹರೆಯದ ರೊನಾಲ್ಡೊ ಚಾಂಪಿಯನ್ ಲೀಗ್ ಟೂರ್ನಿಯಲ್ಲಿ 12 ಪಂದ್ಯಗಳಲ್ಲಿ 16 ಗೋಲುಗಳನ್ನು ಬಾರಿಸಿದ್ದರಲ್ಲದೆ, 2016 ಯುರೋ ಚಾಂಪಿಯನ್‌ಶಿಪ್‌ನಲ್ಲಿ ಪೋರ್ಚುಗಲ್ ತಂಡವನ್ನು ವಿಜಯದತ್ತ ಮುನ್ನಡೆಸಿದ್ದರು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರೊನಾಲ್ಡೊ, ಇದು ನನ್ನ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ವರ್ಷವಾಗಿದೆ ಎಂದು ತಿಳಿಸಿದ್ದಾರೆ.

2016ನೇ ಸಾಲಿನ ಪ್ರಶಸ್ತಿ ರೇಸ್‌ನಲ್ಲಿ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಮತ್ತು ಫ್ರಾನ್‌ನ ಆ್ಯಂಟನಿ ಗ್ರೈಜ್ಮನ್ ಅವರನ್ನು ಹಿಂದಿಕ್ಕಿಕೊಂಡು ರೊನಾಲ್ಡೊ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಇದೇ ವೇಳೆ ಪೋರ್ಚುಗಲ್‌ ತಂಡದ ಕೋಚ್ ಫರ್ನಾಂಡೊ ಸ್ಯಾಂಟೆೋಸ್ ವರ್ಷದ ಶ್ರೇಷ್ಠ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ಅಮೆರಿಕದ ಮಹಿಳಾ ಫುಟ್ಬಾಲ್ ಆಟಗಾರ್ತಿ ಕಾರ್ಲಿ ಲ್ಲಾಯ್ಡ್ ಮಹಿಳಾ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.

ಇದಕ್ಕೂ ಮೊದಲು 2008ರಲ್ಲಿ ಮೊದಲ ಬಾರಿ ಬ್ಯಾಲನ್ ಡಿಓರ್ ಪ್ರಶಸ್ತಿ ವಿಜೇತರಾಗಿದ್ದ ರೊನಾಲ್ಡೊ, ಬಳಿಕ 2013 ಹಾಗೂ 2014ನೇ ಸಾಲಿನಲ್ಲೂ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಅರ್ಹವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌