ಆ್ಯಪ್ನಗರ

ಕಾಮನ್‌ವೆಲ್ತ್ ಗೇಮ್ಸ್; ಕುಸ್ತಿಯಲ್ಲಿ ದಿವ್ಯಗೆ ಕಂಚು

ಶುಕ್ರವಾರ ನಡೆದ ಮಹಿಳಾ ಕುಸ್ತಿ 68 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ದಿವ್ಯ ಕಂಚಿನ ಪದಕ ಬಾಚಿಕೊಂಡರು.

Vijaya Karnataka Web 13 Apr 2018, 2:17 pm
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ದಿವ್ಯ ಕಕ್ರಾನ್‌ ಕಂಚಿನ ಪದಕ ಗೆದ್ದಿದ್ದಾರೆ.
Vijaya Karnataka Web divya-kakran


ಇದರೊಂದಿಗೆ 37 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಕುಸ್ತಿ 68 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ದಿವ್ಯ ಕಂಚಿನ ಪದಕ ಬಾಚಿಕೊಂಡರು.


ತಮ್ಮ ಎದುರಾಳಿ ಬಾಂಗ್ಲಾದೇಸದ ಶೆರಿನ್ ಸುಲ್ತಾನಾ ಸವಾಲನ್ನು ಮೆಟ್ಟಿ ನಿಂತ ದಿವ್ಯ ದೇಶಕ್ಕೆ ಹೆಮ್ಮೆಯಾಗಿದ್ದಾರೆ.

ಕೇವಲ 36 ಸೆಕೆಂಡುಗಳಲ್ಲಿ ಎದುರಾಳಿಯನ್ನು ಮಗುಚಿ ಹಾಕಿದ ದಿವ್ಯ 5-0 ಅಂತರದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಇದುವರೆಗಿನ ಭಾರತದ ಪದಕ ಪಟ್ಟಿ ಇಂತಿದೆ:

ಒಟ್ಟು - 38

ಚಿನ್ನ - 17
ಬೆಳ್ಳಿ - 9
ಕಂಚು - 12

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌