ಆ್ಯಪ್ನಗರ

ಕಾಮನ್ ವೆಲ್ತ್: ಭಾರತಕ್ಕೆ 3 ಚಿನ್ನ, 2 ಬೆಳ್ಳಿ

ಗೋಲ್ಡ್ ಕೋಸ್ಟ್‌ನಲ್ಲಿ ಸಾಗುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದು ಭಾರತ 4 ಪದಕಗಳನ್ನು ಮುಡಿಗೇರಿಸಿಕೊಂಡಿದೆ.

TIMESOFINDIA.COM 14 Apr 2018, 2:06 pm
ಹೊಸದಿಲ್ಲಿ: ಗೋಲ್ಡ್ ಕೋಸ್ಟ್‌ನಲ್ಲಿ ಸಾಗುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದು ಭಾರತ 4 ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಮೇರಿ ಕೋಮ್, ಗೌರವ್ ಸೋಲಂಕಿ, ಅಮಿತ್ ಪಂಘಲ್ ಹಾಗೂ ಮನೀಶ್ ಕೌಶಿಕ್ ಭಾರತದ ಪಟ್ಟಿಗೆ 4 ಪದಕ ಸೇರಿಸಿದ್ದಾರೆ.
Vijaya Karnataka Web cw


ಮೇರಿ ಕೋಮ್‍ಗೆ ಮೊದಲ ಚಿನ್ನದ ಪದಕ

ಮಹಿಳೆಯರ 45-48 ಕೆ.ಜಿ ವಿಭಾಗದ ಫೈನಲ್ಸ್‌ನಲ್ಲಿ ಭಾರತದ ಹಿರಿಯ ಅನುಭವಿ ತಾರೆ ಎಂಸಿ ಮೇರಿ ಕೋಮ್ ಅವರು ಉತ್ತರ ಐರ್ಲೆಂಡ್‌ನ ಕ್ರಿಸ್ಟಿನಾ ಒಹಾರಾ ಅವರನ್ನು ಮಣಿಸಿ ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಮಹಿಳೆಯರ 45ರಿಂದ 48 ಕೆ.ಜಿ ವಿಭಾಗದಲ್ಲಿ 35ರ ಹರೆಯದ ಮೇರಿ, ಶ್ರೀಲಂಕಾದ ಅನುಷಾ ದಿಲ್ರುಕ್ಷೆ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಸ್ವರ್ಣ ಗೆದ್ದ ಸೋಲಂಕಿ

ಪುರುಷರ 53 ಕೆ.ಜಿ. ಬಾಕ್ಸಿಂಗ್‌ ವಿಭಾಗದ ಗೌರವ್‌ ಸಲಂಕಿ ಅವರು ಇರ್‌ವಿನ್‌ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಶೂಟರ್ ಸಂಜೀವ್‌ಗೆ ಚಿನ್ನ

ಪುರುಷರ 50 ಮೀ. ರೈಫಲ್‌ 3 ಪೊಜಿಷನ್‌ ವಿಭಾಗದಲ್ಲಿ ಶೂಟರ್‌ ಸಂಜೀವ್‌ ರಜಪೂತ್‌ ಬಂಗಾರದ ಪದಕ ಗೆದ್ದಿದ್ದಾರೆ. 454.5 ಪಾಯಿಂಟ್‌ ಗಳಿಸುವ ಮೂಲಕ 37ರ ಹರಯದ ಸಂಜೀವ್‌ ಪ್ರಥಮ ಬಹುಮಾನಕ್ಕೆ ಮುತ್ತಿಕ್ಕಿದರು.

ಅಮಿತ್‌ಗೆ ಬೆಳ್ಳಿ ಪದಕ

ಪುರುಷರ 46-49 ಕೆ.ಜಿ ವಿಭಾಗದ ಬಾಕ್ಸಿಂಗ್‌ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಇಂಗ್ಲೆಂಡ್‌ನ ಗಲಾಲ್ ಯಫಾಯಿ ವಿರುದ್ಧ ಸೋಲು ಅನುಭವಿಸಿದ ಅಮಿತ್, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಕೌಶಿಕ್

ಬಾಕ್ಸಿಂಗ್ ವಿಭಾಗದಲ್ಲಿ ಹ್ಯಾರಿ ಗಾರ್‌ಸೈಡ್ ವಿರುದ್ಧ 3:2 ಅಂಕಗಳ ಟಫ್ ಪೈಟ್ ನೀಡುವ ಮೂಲಕ ಸೋಲು ಅನುಭವಿಸಿದ ಮನೀಶ್ ಕೌಶಿಕ್ ಅವರು ಬೆಳ್ಳಿ ಪದಕ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌