ಆ್ಯಪ್ನಗರ

ಕೊನೆಗೂ ಗೆದ್ದ ಡೆಲ್ಲಿ

ಚೇತೋಹಾರಿ ಪ್ರದರ್ಶನ ನೀಡಿದ ಡೆಲ್ಲಿ ಡೈನಮೋಸ್‌ ತಂಡ ಪ್ರಸಕ್ತ ಸಾಲಿನ ಐಎಸ್‌ಎಲ್‌ನ 58ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಜಯ ಗಳಿಸಿತು.

Agencies 16 Dec 2018, 5:00 am
ಚೆನ್ನೈ : ಚೇತೋಹಾರಿ ಪ್ರದರ್ಶನ ನೀಡಿದ ಡೆಲ್ಲಿ ಡೈನಮೋಸ್‌ ತಂಡ ಪ್ರಸಕ್ತ ಸಾಲಿನ ಐಎಸ್‌ಎಲ್‌ನ 58ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಜಯ ಗಳಿಸಿತು. ಡೆಲ್ಲಿ ಪಾಲಿಗೆ ಇದು ಮೊದಲ ಜಯ. ಪ್ರಸಕ್ತ ಲೀಗ್‌ನ ಮೊದಲ ಹಂತದಲ್ಲಿ ಗೆಲುವೇ ಕಾಣದೆ ವರ್ಷಾಂತ್ಯಗೊಳಿಸಿದ ಅಪಖ್ಯಾತಿಗೊಳಗಾಗುವುದರಿಂದ ತಂಡ ಸ್ವಲ್ಪದರಲ್ಲೇ ಪಾರಾಯಿತು.
Vijaya Karnataka Web delhi punish wayward chennaiyin for first win
ಕೊನೆಗೂ ಗೆದ್ದ ಡೆಲ್ಲಿ


ಇಲ್ಲಿನ ಜವಾಹಾರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ 3-1 ಗೋಲ್‌ಗಳಿಂದ ಆತಿಥೇಯ ಚೆನ್ನೈಯಿನ್‌ಗೆ ಸೋಲುಣಿಸಿ ಇದೇ ಮೊದಲ ಬಾರಿ ಪೂರ್ಣ 3 ಅಂಕ ತನ್ನದಾಗಿಸಿಕೊಂಡಿತು. ಡೆಲ್ಲಿ ಪರ ಡೇನಿಯಲ್‌ ಲಾಲ್‌ಹ್ಲಿಂಪುಯಾ (16ನೇ ನಿ.), ಬಿಕ್ರಮ್‌ಜಿತ್‌ ಸಿಂಗ್‌ (78ನೇ ನಿ.) ಮತ್ತು ನಂದಕುಮಾರ್‌ ಸೆಕರ್‌ (82ನೇ ನಿ.) ತಲಾ ಒಂದು ಗೋಲ್‌ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಸೋತ ತಂಡದ ಪರ ರಾಫೀಲ್‌ ಆಗಸ್ಟೋ (39ನೇ ನಿ.) ಏಕೈಕ ಗೋಲ್‌ ದಾಖಲಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌