ಆ್ಯಪ್ನಗರ

ಬೆಳ್ಳಿ ಗೆದ್ದ ದಿವ್ಯಾನ್ಶ್‌ಗೆ ಒಲಿಂಪಿಕ್‌ ಟಿಕೆಟ್‌

ಭಾರತದ 17 ವರ್ಷದ ಯುವ ಶೂಟರ್‌ ದಿವ್ಯಾನ್ಶ್‌ ಸಿಂಗ್‌ ಪನ್ವರ್‌ 2019ನೇ ಸಾಲಿನ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ರಜತ ಪದಕ ಗೆಲ್ಲುವುದರೊಂದಿಗೆ ಶೂಟಿಂಗ್‌ ವಿಭಾಗದಲ್ಲಿ ದೇಶದ ನಾಲ್ಕನೇ ಒಲಿಂಪಿಕ್‌ ಕೋಟಾ ಸ್ಥಾನ ಗಿಟ್ಟಿಸಿದ್ದಾರೆ.

Agencies 27 Apr 2019, 5:00 am
ಬೀಜಿಂಗ್‌ : ಭಾರತದ 17 ವರ್ಷದ ಯುವ ಶೂಟರ್‌ ದಿವ್ಯಾನ್ಶ್‌ ಸಿಂಗ್‌ ಪನ್ವರ್‌ 2019ನೇ ಸಾಲಿನ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ರಜತ ಪದಕ ಗೆಲ್ಲುವುದರೊಂದಿಗೆ ಶೂಟಿಂಗ್‌ ವಿಭಾಗದಲ್ಲಿ ದೇಶದ ನಾಲ್ಕನೇ ಒಲಿಂಪಿಕ್‌ ಕೋಟಾ ಸ್ಥಾನ ಗಿಟ್ಟಿಸಿದ್ದಾರೆ.
Vijaya Karnataka Web divyansh secures indias fourth olympic quota in shooting
ಬೆಳ್ಳಿ ಗೆದ್ದ ದಿವ್ಯಾನ್ಶ್‌ಗೆ ಒಲಿಂಪಿಕ್‌ ಟಿಕೆಟ್‌

ಶುಕ್ರವಾರ ನಡೆದ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ದಿವ್ಯಾನ್ಶ್‌ ಒಟ್ಟು 249.0 ಅಂಕ ಕಲೆಹಾಕಿ ದ್ವಿತೀಯ ಸ್ಥಾನ ಗಳಿಸಿದರು. ಇದೀಗ 2ನೇ ಬಾರಿ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಪನ್ವರ್‌ ಕೇವಲ 0.4 ಅಂಕಗಳ ಅಂತರದಲ್ಲಿ ಸ್ವರ್ಣ ಪದಕದಿಂದ ವಂಚಿತರಾಗಿ ನಿರಾಸೆಗೊಳಗಾದರು. 249.4 ಅಂಕ ಗಳಿಸಿದ ಚೀನಾದ ಝಿಚೆಗ್‌ ಹುಯಿ ಸ್ವರ್ಣ ಗೆದ್ದರೆ, ರಷ್ಯಾದ ಗ್ರೆಗೋರಿ ಶಮಕೋವ್‌ 227.5 ಅಂಕಗಳೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ದಿವ್ಯಾನ್ಶ್‌ಗೂ ಮೊದಲು ಭಾರತದ ಪರ ಅಂಜುಮ್‌ ಮೌದ್ಗಿಲ್‌ ಮತ್ತು ಅಪೂರ್ವಿ ಚಾಂಡೆಲಾ (ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆ) ಹಾಗೂ ಸೌರಭ್‌ ಚೌಧರಿ (ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆ) 2020ರ ಟೋಕಿಯೊ ಒಲಿಂಪಿಕ್‌ ಕೋಟಾ ಸ್ಥಾನ ಗಿಟ್ಟಿಸಿದ್ದರು. ಈ ಮೂವರು ಇತ್ತೀಚೆಗೆ ನಡೆದ ವಿಶ್ವಕಪ್‌ ಮತ್ತು ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಕ್‌ ಕೋಟಾ ಸ್ಥಾನ ಗಿಟ್ಟಿಸಿದ್ದರು.
ದಿವ್ಯಾನ್ಶ್‌ ಒಟ್ಟು 629.2 ಅಂಕ ಕಲೆಹಾಕುವುದರೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಭಾರತದ ಇತರ ಶೂಟರ್‌ಗಳಾದ ರವಿಕುಮಾರ್‌ (44ನೇ ಸ್ಥಾನ) ಮತ್ತು ದೀಪಕ್‌ ಕುಮಾರ್‌ (57ನೇ ಸ್ಥಾನ) ನಿರಾಸೆ ಅನುಭವಿಸಿದರು. ದಿವ್ಯಾನ್ಶ್‌ ಅವರ ಬೆಳ್ಳಿ ಪದಕವೂ ಸೇರಿದಂತೆ ಭಾರತ ಈ ವಿಶ್ವಕಪ್‌ನಲ್ಲಿ ಒಟ್ಟು 3 ಪದಕಗಳ ಒಡೆಯನಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌