ಆ್ಯಪ್ನಗರ

ಎಟಿಪಿ ಫೈನಲ್ಸ್‌ ಜೊಕೊವಿಕ್‌ ಅಜೇಯ ಓಟ ಅಬಾಧಿತ

ಸರ್ಬಿಯಾದ ಟೆನಿಸ್‌ ದೊರೆ ನೊವಾಕ್‌ ಜೊಕೊವಿಕ್‌ ಇದೀಗ ಮರಿನ್‌ ಸಿಲಿಚ್‌ ವಿರುದ್ಧದ ಗುಂಪಿನ ಹಂತದ ಕೊನೆಯ ಪಂದ್ಯದಲ್ಲೂ ಜಯ ಗಳಿಸುವುದರೊಂದಿಗೆ ವರ್ಷಾಂತ್ಯದ ಎಟಿಪಿ ಫೈನಲ್ಸ್‌ನಲ್ಲಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

Agencies 18 Nov 2018, 5:00 am
ಲಂಡನ್‌ : ಸರ್ಬಿಯಾದ ಟೆನಿಸ್‌ ದೊರೆ ನೊವಾಕ್‌ ಜೊಕೊವಿಕ್‌ ಇದೀಗ ಮರಿನ್‌ ಸಿಲಿಚ್‌ ವಿರುದ್ಧದ ಗುಂಪಿನ ಹಂತದ ಕೊನೆಯ ಪಂದ್ಯದಲ್ಲೂ ಜಯ ಗಳಿಸುವುದರೊಂದಿಗೆ ವರ್ಷಾಂತ್ಯದ ಎಟಿಪಿ ಫೈನಲ್ಸ್‌ನಲ್ಲಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.
Vijaya Karnataka Web djokovic looks ahead to anderson semi final after cilic victory
ಎಟಿಪಿ ಫೈನಲ್ಸ್‌ ಜೊಕೊವಿಕ್‌ ಅಜೇಯ ಓಟ ಅಬಾಧಿತ


ಇಲ್ಲಿನ ಓ2 ಅರೆನಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಪಟ್ಟಕ್ಕೆ ಒಪ್ಪುವಂತೆ ಆಡಿದ ಜೊಕೊವಿಕ್‌ ಕ್ರೊವೇಶಿಯಾದ ಮರಿನ್‌ ಸಿಲಿಚ್‌ ಅವರನ್ನು 7-6 (9-7), 6-2 ನೇರ ಸೆಟ್‌ಗಳಿಂದ ಮಣಿಸಿದರು. ಇದಕ್ಕೂ ಮೊದಲಿನ ಎರಡು ಪಂದ್ಯಗಳಲ್ಲೂ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ನೇರ ಸೆಟ್‌ಗಳ ಜಯ ದಾಖಲಿಸಿದ್ದರು. ಪ್ರತಿಷ್ಠಿತ ಎಟಿಪಿ ಫೈನಲ್ಸ್‌ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಜಯಿಸುವ ಕನಸಿನಲ್ಲಿರುವ 16 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳ ಒಡೆಯ ಜೊಕೊವಿಕ್‌ಗೆ ಸೆಮಿಫೈನಲ್ಸ್‌ನಲ್ಲಿ ವಿಶ್ವದ 6ನೇ ಶ್ರೇಯಾಂಕದ ಆಟಗಾರ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಎದುರಾಳಿ. ಇನ್ನೊಂದು ಸೆಮಿಫೈನಲ್‌ ಹಣಾಹಣಿ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ವಿಶ್ವದ 5ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ನಡುವೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌