ಅರ್ಜೆಂಟೀನಾಗೆ ಇಂಗ್ಲೆಂಡ್ ಶಾಕ್
ಇಂಗ್ಲೆಂಡ್ ತಂಡ ಬುಧವಾರ ಮೊದಲ ಕ್ವಾರ್ಟರ್ಫೈನಲ್ನಲ್ಲಿ ಒಲಿಂಪಿಕ್ ಚಾಂಪಿಯನ್ಸ್ ಅರ್ಜೆಂಟೀನಾ ತಂಡವನ್ನು 3-2 ಗೋಲ್ಗಳ ಅಂತರದಿಂದ ಸೋಲಿಸಿ ಅಚ್ಚರಿ ಫಲಿತಾಂಶ ದಾಖಲಿಸಿದೆ.
PTI 13 Dec 2018, 5:00 am
ಇಂಗ್ಲೆಂಡ್ ತಂಡ ಬುಧವಾರ ಮೊದಲ ಕ್ವಾರ್ಟರ್ಫೈನಲ್ನಲ್ಲಿ ಒಲಿಂಪಿಕ್ ಚಾಂಪಿಯನ್ಸ್ ಅರ್ಜೆಂಟೀನಾ ತಂಡವನ್ನು 3-2 ಗೋಲ್ಗಳ ಅಂತರದಿಂದ ಸೋಲಿಸಿ ಅಚ್ಚರಿ ಫಲಿತಾಂಶ ದಾಖಲಿಸಿದೆ.
ಪಂದ್ಯ ಆರಂಭಗೊಂಡ 17ನೇ ನಿಮಿಷದಲ್ಲೇ ಎದುರಾಳಿಗೆ ಗೋಲು ಬಿಟ್ಟುಕೊಟ್ಟು ಆಘಾತಕ್ಕೊಳಗಾಗಿದ್ದ ಆಂಗ್ಲರ ಪಡೆ ಆ ಬಳಿಕ ಚೇತರಿಸಿಕೊಂಡು ಹಾಕಿ ವಿಶ್ವಕಪ್ ಇತಿಹಾಸದಲ್ಲಿ ನಿರಂತರ 3ನೇ ಬಾರಿಗೆ ಸೆಮಿಫೈನಲ್ಸ್ ಪ್ರವೇಶಿಸಿತು. ಇಂಗ್ಲೆಂಡ್ ತಂಡ ಶನಿವಾರದ ಸೆಮಿಫೈನಲ್ನಲ್ಲಿ ಜರ್ಮನಿ ಅಥವಾ ಬೆಲ್ಜಿಯಂ ತಂಡದ ವಿರುದ್ಧ ಆಡಬೇಕಿದೆ.
ಆಸ್ಪ್ರೇಲಿಯಾ ಜಯಭೇರಿ
ದಿನದ 2ನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಪ್ರೇಲಿಯಾ ತಂಡ 3-0 ಗೋಲ್ಗಳ ಅಂತರದಿಂದ ಫ್ರಾನ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್ಸ್ ಪ್ರವೇಶಿಸಿತು. ಗುಂಪಿನ ಹಂತದಲ್ಲಿ ಅರ್ಜೆಂಟೀನಾ ತಂಡವನ್ನೂ (5-3), ಕ್ರಾಸ್ಓವರ್ ಪಂದ್ಯದಲ್ಲಿ ಚೀನಾ ತಂಡವನ್ನೂ (1-0) ಸೋಲಿಸಿ 8ರ ಘಟ್ಟಕ್ಕೆ ಲಗ್ಗೆ ಹಾಕಿದ್ದ ಫ್ರಾನ್ಸ್ ತಂಡ ಬುಧವಾರ ಆಸ್ಪ್ರೇಲಿಯಾ ಎದುರು ಅಕ್ಷರಶಃ ಮಂಕಾಯಿತು. ಕಾಂಗರೂ ತಂಡದ ಪರ ಹೆವಾರ್ಡ್ ಜೆರೆಮಿ (4ನೇ ನಿಮಿಷ), ಗೋವರ್ಸ್ ಬ್ಲೇಕ್ (19ನೇ ನಿ.) ಮತ್ತು ಝಲೆವ್ಸ್ಕಿ (37ನೇ ನಿ.) ಗೋಲ್ ಬಾರಿಸಿದರು. ಶನಿವಾರದ ಸೆಮಿಫೈನಲ್ನಲ್ಲಿ ಆಸ್ಪ್ರೇಲಿಯಾಕ್ಕೆ ಭಾರತ ಇಲ್ಲವೇ ನೆದರ್ಲೆಂಡ್ಸ್ ಎದುರಾಳಿ.