ಆ್ಯಪ್ನಗರ

55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್‌ ತಂಡ

ಪಾಕಿಸ್ತಾನದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಓಷಿಯಾನಿಯಾ ಒಂದನೇ ಗುಂಪಿನ ಡೇವಿಸ್‌ ಕಪ್‌ ಹಣಾಹಣಿಯಲ್ಲಿ ಪಾಲ್ಗೊಳ್ಳಲು ಭಾರತ ಸರಕಾರದಿಂದ ಅನುಮತಿ ಪಡೆದಿರುವ ಭಾರತ ಟೆನಿಸ್‌ ತಂಡ 55 ವರ್ಷಗಳ ಬಳಿಕ ನೆರೆಯ ರಾಷ್ಟ್ರಕ್ಕೆ ಪಯಣ ಬೆಳೆಸಲಿದೆ.

Vijaya Karnataka 29 Jul 2019, 5:00 am
ಕೋಲ್ಕೊತಾ : ಪಾಕಿಸ್ತಾನದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಓಷಿಯಾನಿಯಾ ಒಂದನೇ ಗುಂಪಿನ ಡೇವಿಸ್‌ ಕಪ್‌ ಹಣಾಹಣಿಯಲ್ಲಿ ಪಾಲ್ಗೊಳ್ಳಲು ಭಾರತ ಸರಕಾರದಿಂದ ಅನುಮತಿ ಪಡೆದಿರುವ ಭಾರತ ಟೆನಿಸ್‌ ತಂಡ 55 ವರ್ಷಗಳ ಬಳಿಕ ನೆರೆಯ ರಾಷ್ಟ್ರಕ್ಕೆ ಪಯಣ ಬೆಳೆಸಲಿದೆ.
Vijaya Karnataka Web for the first time in 55 years the indian tennis team will travel to pakistan for their two day asia oceania group 1 tie
55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್‌ ತಂಡ


ಕೇಂದ್ರ ಕ್ರೀಡಾ ಸಚಿವಾಲಯದಿಂದ ಭಾರತದ ಆಟಗಾರರ ಪ್ರವಾಸಕ್ಕೆ ಒಪ್ಪಿಗೆ ದೊರೆತಿದ್ದು, ಭದ್ರತೆ ಹಾಗೂ ವೀಸಾಕ್ಕೆ ಸಂಬಂಧಪಟ್ಟಂತೆ ಉಭಯ ದೇಶಗಳ ನಡುವೆ ಮಾತುಕತೆ ಪ್ರಗತಿಯಲ್ಲಿದೆ.

ಆರು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿಯನ್ನು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಪ್ರಧಾನ ಕಾರ್ಯದರ್ಶಿ ಹಿರಣ್ಮಯಿ ಚಟರ್ಜಿ ಭಾನುವಾರ ಖಚಿತಪಡಿಸಿದ್ದಾರೆ. ಡೇವಿಸ್‌ ಕಪ್‌ ಆಡಲು ತೆರಳಲಿರುವ ಆಟಗಾರರ ಪಟ್ಟಿಯನ್ನು ಆಗಸ್ಟ್‌ 5ರಂದು ಬಿಡುಗಡೆ ಮಾಡಲಾಗುವುದು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

''ಇದು ದ್ವಿರಾಷ್ಟ್ರಗಳ ನಡುವಿನ ಟೂರ್ನಿಯಲ್ಲ. ವಿಶ್ವ ಮಟ್ಟದ ಸ್ಪರ್ಧೆ. ಹೀಗಾಗಿ ನಿರಾಕರಿಸಲು ಸಾಧ್ಯವಿಲ್ಲ. ಹೋಗಲು ಒಪ್ಪದಿದ್ದರೆ ದಂಡ ತೆರಬೇಕಾಗುತ್ತದೆ,'' ಎಂದು ಅವರು ಸ್ಪಷ್ಟಪಡಿಸಿದರು.

ಕ್ಲೀನ್‌ ಸ್ವೀಪ್‌: ಭಾರತ ಟೆನಿಸ್‌ ತಂಡ 1964ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಆ ಸರಣಿಯಲ್ಲಿ 4-0 ಅಂತರದಲ್ಲಿ ಗೆದ್ದು ವಿಕ್ರಮ ಮೆರೆದಿತ್ತು. 2006ರಲ್ಲಿ ಮುಂಬಯಿನಲ್ಲಿ ನಡೆದ ಸರಣಿಯಲ್ಲಿ ಭಾರತ 3-2 ಅಂತರದ ಗೆಲುವು ಸಾಧಿಸಿತ್ತು.

ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ಡೇವಿಸ್‌ ಕಪ್‌ ಆಯೋಜಿಸದಂತೆ ಪಾಕಿಸ್ತಾನಕ್ಕೆ ಸುಮಾರು 12 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. 2017ರಲ್ಲಿ ಐಟಿಎಫ್‌ ನಿಷೇಧ ವಾಪಸ್‌ ಪಡೆದ ಕಾರಣ ಟೂರ್ನಿ ಆಯೋಜಿಸಲು ಅವಕಾಶ ದೊರಕಿದೆ. ಆದಾಗ್ಯೂ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ದಾಳಿ ನಡೆದ ಬಳಿಕ ಈ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳದು ಎಂದು ಅಂದಾಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌