ಆ್ಯಪ್ನಗರ

ಬೆಲ್ಜಿಯಂ ಮೇಲೆ ಭಾರತ ಸವಾರಿ

ನ್ಯೂಜಿಲೆಂಡ್‌ನಲ್ಲಿ ಸಾಗುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿ ಹಾಕಿ ಟೂರ್ನಮೆಂಟ್‌ನ ಎರಡನೇ ಲೆಗ್‌ನ ಮಹತ್ವದ ಪಂದ್ಯವೊಂದರಲ್ಲಿ ಪ್ರಬಲ ಬೆಲ್ಜಿಯಂ ವಿರುದ್ಧ ಭಾರತ 5-4 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ.

TIMESOFINDIA.COM 25 Jan 2018, 2:44 pm
ಹೊಸದಿಲ್ಲಿ: ನ್ಯೂಜಿಲೆಂಡ್ನಲ್ಲಿ ಸಾಗುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿ ಹಾಕಿ ಟೂರ್ನಮೆಂಟ್ನ ಎರಡನೇ ಲೆಗ್ನ ಮಹತ್ವದ ಪಂದ್ಯವೊಂದರಲ್ಲಿ ಪ್ರಬಲ ಬೆಲ್ಜಿಯಂ ವಿರುದ್ಧ ಭಾರತ 5-4 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web indian-hockey-team-07


ಬೆಲ್ಜಿಯಂ ವಿರುದ್ಧವೇ ಮೊದಲ ಲೆಗ್ನ ಲೀಗ್ ಹಾಗೂ ಫೈನಲ್ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ಪುಟಿದೆದ್ದಿರುವ ಭಾರತ ದ್ವಿತೀಯ ಲೆಗ್ನಲ್ಲಿ ಅಮೋಘ ನಿರ್ವಹಣೆಯನ್ನು ಮುಂದುವರಿಸಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದಿರುವ ಭಾರತ ಇದೀಗ ಬೆಲ್ಜಿಯಂ ಮೇಲೂ ಸವಾರಿ ಮಾಡಿದೆ.

ಭಾರತದ ಪರ ರುಪಿಂದರ್ ಪಾಲ್ ಸಿಂಗ್, ದಿಲ್ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ್ ಹಾಗೂ ಹರ್ಮನ್ಪ್ರೀತ್ ಸಿಂಗ್ ಗೆಲುವಿನ ಗೋಲುಗಳನ್ನು ದಾಖಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌