ಆ್ಯಪ್ನಗರ

ಎಂಬಾಪೆ ಪೂರ್ಣ ಸಂಭಾವನೆ ಚಾರಿಟಿಗೆ

ಅರ್ಜೆಂಟೀನಾ ವಿರುದ್ಧದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅವಳಿ ಗೋಲುಗಳೊಂದಿಗೆ ಅಬ್ಬರಿಸಿ ಫ್ರಾನ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ 19 ವರ್ಷದ ಯುವ ಆಟಗಾರ ಕೈಲಿಯಾನ್‌ ಎಂಬಾಪೆ, ತಮ್ಮ ಸಂಭಾವನೆಯನ್ನು ದತ್ತಿ ಸಂಸ್ಥೆಯೊಂದಿಗೆ ನೀಡುವುದಾಗಿ ಹೇಳುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ.

Agencies 4 Jul 2018, 5:00 am
ಮಾಸ್ಕೊ: ಅರ್ಜೆಂಟೀನಾ ವಿರುದ್ಧದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅವಳಿ ಗೋಲುಗಳೊಂದಿಗೆ ಅಬ್ಬರಿಸಿ ಫ್ರಾನ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ 19 ವರ್ಷದ ಯುವ ಆಟಗಾರ ಕೈಲಿಯಾನ್‌ ಎಂಬಾಪೆ, ತಮ್ಮ ಸಂಭಾವನೆಯನ್ನು ದತ್ತಿ ಸಂಸ್ಥೆಯೊಂದಿಗೆ ನೀಡುವುದಾಗಿ ಹೇಳುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ.
Vijaya Karnataka Web france star kylian mbappe donating world cup bonus to child disability charity
ಎಂಬಾಪೆ ಪೂರ್ಣ ಸಂಭಾವನೆ ಚಾರಿಟಿಗೆ


ಫಿಫಾ ವಿಶ್ವಕಪ್‌ನಲ್ಲಿ ಎಂಬಾಪೆ ಪ್ರತೀ ಪಂದ್ಯಕ್ಕೆ 15.31 ರೂ. ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ದೇಶವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ವೇತನ ಪಡೆಯಬಾರದು ಎಂಬುದು ಅವರ ನಿಲುವು. ಹೀಗಾಗಿ ವಿಶ್ವಕಪ್‌ನಲ್ಲಿ ತಮಗೆ ಸಿಗಲಿರುವ ಪೂರ್ತಿ ಸಂಭಾವನೆಯನ್ನು ವಿಶೇಷಚೇತನ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವ 'ಪ್ರೀಯರ್ಸ್‌ ಡಿ ಕಾರ್ಡೀಸ್‌ ಅಸೋಸಿಯೇಷನ್‌' ಎಂಬ ಸಂಸ್ಥೆಗೆ ನೀಡಲು ನಿರ್ಧರಿಸಿದ್ದಾರೆ. ಯುವ ಸ್ಟ್ರೈಕರ್‌ ಎಂಬಾಪೆ ಅವರನ್ನು ಫುಟ್ಬಾಲ್‌ ಜಗತ್ತಿನ ಮುಂದಿನ ಸೂಪರ್‌ಸ್ಟಾರ್‌ ಎಂದೇ ಕರೆಯಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌