ಆ್ಯಪ್ನಗರ

ಕನ್ನಡಿಗ ಮನೋಜ್‌ ಕುಮಾರ್‌ಗೆ ಚಿನ್ನ

ಫಿಲಿಪ್ಪಿನ್ಸ್‌ನ ಸೆಬು ಸಿಟಿಯಲ್ಲಿ ಭಾನುವಾರ ನಡೆದ ವಿಶ್ವ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ರಾಮಮೂರ್ತಿ ನಗರದ ಮನೋಜ್‌ ಕುಮಾರ್‌ ಮೀಡಿಯಮ್‌ ಕ್ಲಾಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

Vijaya Karnataka Web 4 Jun 2018, 10:05 am
ಬೆಂಗಳೂರು: ಫಿಲಿಪ್ಪಿನ್ಸ್‌ನ ಸೆಬು ಸಿಟಿಯಲ್ಲಿ ಭಾನುವಾರ ನಡೆದ ವಿಶ್ವ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ರಾಮಮೂರ್ತಿ ನಗರದ ಮನೋಜ್‌ ಕುಮಾರ್‌ ಮೀಡಿಯಮ್‌ ಕ್ಲಾಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
Vijaya Karnataka Web Body


ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳೊಂದಿಗೆ ಒಟ್ಟು ಆರು ಪದಕಗಳ ಸಾಧನೆ ಮಾಡಿದೆ. ಶಾರ್ಟ್‌ ಕ್ಲಾಸ್‌ ವಿಭಾಗದಲ್ಲಿ ಗಿರೀಶ್‌ ಶೆಟ್ಟಿ ಹಾಗೂ ಮೀಡಿಯಮ್‌ ಕ್ಲಾಸ್‌ ವಿಭಾಗದಲ್ಲಿ ರಾಜಾ ಮುರುಗನ್‌ ಬೆಳ್ಳಿ ಗೆದ್ದ ಸ್ಪರ್ಧಿಗಳು. ಭಾರತದ ಮಹೇಂದ್ರ ಕುಮಾರ್‌ ಕೂಡ ಬೆಳ್ಳಿಯ ಸಾಧನೆ ಮಾಡಿದರು. ಸೂಪರ್‌ ಟಾಲ್‌ ವಿಭಾಗದಲ್ಲಿ ಸಯ್ಯದ್‌ ಸಿದ್ಧಿಕ್‌ ಹಾಗೂ ಜೂನಿಯರ್‌ ವಿಭಾಗದಲ್ಲಿ ನರೇಶ್‌ ಸಿಂಗ್‌ ಕಂಚಿನ ಸಾಧನೆ ಮಾಡಿದ್ದಾರೆ.

ಭಾರತ ತಂಡವನ್ನು ಕರ್ನಾಟಕದ ಎ.ವಿ. ರವಿ ಮುನ್ನಡೆಸಿದ್ದರು. ಫಿಲಿಪ್ಪಿನ್ಸ್‌ನ ಸೆಬು ಸಿಟಿಯಿಂದ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಭಾರತ ತಂಡದ ನಾಯಕ ರವಿ, ''ಭಾರತದ ಪ್ರತಿಯೊಬ್ಬ ಸ್ಪರ್ಧಿಯೂ ಉತ್ತಮ ರೀತಿಯಲ್ಲಿ ಹೋರಾಟ ನೀಡಿದ್ದಾರೆ. ಕನ್ನಡಿಗ ಮನೋಜ್‌ ಕುಮಾರ್‌ ಗೆದ್ದಿರುವುದು ಹೆಮ್ಮೆಯ ಸಂಗತಿ. ತಂಡದ ನಾಯಕನಾಗಿರುವ ನನಗೆ ನಮ್ಮ ತಂಡದಲ್ಲಿದ್ದ ಕನ್ನಡಿಗರೊಬ್ಬರು ಸಾಧನೆ ಮಾಡಿರುವುದು ಖುಷಿ ಕೊಟ್ಟಿದೆ. ಯುವ ಸ್ಪರ್ಧಿ ಮನೋಜ್‌ ಕುಮಾರ್‌ ಅವರ ಸಾಧನೆ ಇತರರಿಗೆ ಮಾದರಿಯಾಗಲಿದೆ,'' ಎಂದರು.

ಮಾಸ್ಟರ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಎ.ವಿ. ರವಿ ಹಾಗೂ ಅಶೋಕ್‌ ಕುಮಾರ್‌ ಅನುಕ್ರಮವಾಗಿ ಎಂಟು ಹಾಗೂ ಆರನೇ ಸ್ಥಾನ ಗಳಿಸಿದರು. ಶಂಕರ್‌ ಗೌಡ, ಇಸ್ಮೈಲ್‌ ಖಾನ್‌ ಹಾಗೂ ತುಷಾರ್‌ ಗೌಡ ಅವರು ಉತ್ತಮ ಪೈಪೋಟಿ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌