Please enable javascript.ಮುಂಬಾ ನಾಕ್‌ಔಟ್ ಸ್ಥಾನ ಖಚಿತ - Guaranteed, place , knockout mumba - Vijay Karnataka

ಮುಂಬಾ ನಾಕ್‌ಔಟ್ ಸ್ಥಾನ ಖಚಿತ

ವಿಕ ಸುದ್ದಿಲೋಕ 26 Feb 2016, 4:00 am
Subscribe

ಸತತ ವೈಫಲ್ಯಗಳಿಂದ ಹೊರ ಬಾರದೆ ಈಗಾಗಲೇ ಸ್ಪರ್ಧೆಯಿಂದ ಹೊರ ಬಿದ್ದಿರುವ ಬೆಂಗಳೂರು ಬುಲ್ಸ್ ತಂಡ, ಹಾಲಿ ಚಾಂಪಿಯನ್ಸ್ ಯು ಮುಂಬಾ ಎದುರು ಮತ್ತೊಂದು ಸೋಲಿನ ಮುಖಭಂಗ ಅನುಭವಿಸಿತು.

guaranteed place knockout mumba
ಮುಂಬಾ ನಾಕ್‌ಔಟ್ ಸ್ಥಾನ ಖಚಿತ
ಮುಂದುವರಿದ ಬುಲ್ಸ್ ಪಡೆಯ ನೀರಸ ಪ್ರದರ್ಶನ ಅನೂಪ್ ಕುಮಾರ್ ಪಡೆಗೆ 21 ಅಂಕಗಳ ಭರ್ಜರಿ ಜಯ

ವಿಜೇತ್ ಕುಮಾರ್ ಡಿ.ಎನ್ ಹೊಸದಿಲ್ಲಿ

ಸತತ ವೈಫಲ್ಯಗಳಿಂದ ಹೊರ ಬಾರದೆ ಈಗಾಗಲೇ ಸ್ಪರ್ಧೆಯಿಂದ ಹೊರ ಬಿದ್ದಿರುವ ಬೆಂಗಳೂರು ಬುಲ್ಸ್ ತಂಡ, ಹಾಲಿ ಚಾಂಪಿಯನ್ಸ್ ಯು ಮುಂಬಾ ಎದುರು ಮತ್ತೊಂದು ಸೋಲಿನ ಮುಖಭಂಗ ಅನುಭವಿಸಿತು.

ಇಲ್ಲಿನ ತ್ಯಾಗರಾಜ್ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಮೂರನೇ ಆವತ್ತಿಯ ಪ್ರೊ ಕಬಡ್ಡಿ ಟೂರ್ನಿಯ 44ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ 39-18 ಅಂಕಗಳಿಂದ ಬುಲ್ಸ್ ಪಡೆಯನ್ನು ಬಗ್ಗು ಬಡಿಯಿತು.

ಕರ್ನಾಟಕದ ಯು ಮುಂಬಾ ರೈಡರ್ ರಿಶಾಂಕ್ ದೇವಾಡಿಗ (7) ಹಾಗೂ ನಾಯಕ ಅನೂಪ್ ಕುಮಾರ್ (6) ಭರ್ಜರಿ ರೈಡ್‌ಗಳ ಮೂಲಕ ಅಂಕಗಳನ್ನು ಹೊತ್ತುತಂದು ತಂಡಕ್ಕೆ ಸೆಮಿಫೈನಲ್ ಸ್ಥಾನವನ್ನು ಖಚಿತ ಪಡಿಸಿದರು. ಟ್ಯಾಕಲ್‌ನಲ್ಲಿ ಮೋಹಿತ್ ಚಿಲ್ಲಾರ್ (5) ಹಾಗೂ ಫಜಲ್ ಅತ್ರಾಂಚಲಿ (4) ಭದ್ರ ಕೋಟೆಯಾಗಿ ನಿಂತು ಎದುರಾಳಿ ತಂಡವನ್ನು 3 ಬಾರಿ ಆಲ್‌ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜಯದೊಂದಿಗೆ ಮುಂಬಾ ತಂಡ 10 ಪಂದ್ಯಗಳಲ್ಲಿ 40 ಅಂಕಗಳನ್ನು ಸಂಪಾದಿಸಿ ನಾಕ್‌ಔಟ್ ಸ್ಥಾನವನ್ನು ಖಾತ್ರಿಪಡಿಸಿಕೊಂಡಿತು. ಬುಲ್ಸ್ ಪರ ಪವನ್ ಕುಮಾರ್ (5) ಏಕಾಂಗಿ ಹೋರಾಟ ನಡೆಸಿದರು. ಆದರೆ, ನಾಯಕ ಸುರ್‌ಜೀತ್ ನರ್ವಾಲ್ ಒಂದು ಅಂಕವನ್ನೂ ಗಳಿಸಿದೆ ನಿರಾಸೆ ಮೂಡಿಸಿದರು.

ಬುಲ್ಸ್ ರೈಡರ್‌ಗಳ ವೈಫಲ್ಯ

ಪಂದ್ಯದ ಮೊದಲ ರೈಡ್‌ನಲ್ಲಿ ಬೆಂಗಳೂರು ತಂಡದ ನಾಯಕ ಸುರ್‌ಜೀತ್ ನರ್ವಾಲ್ ಔಟಾಗುವುದರೊಂದಿಗೆ ಬುಲ್ಸ್ ರೈಡರ್‌ಗಳ ಫೈಫಲ್ಯ ಆರಂಭವಾಯಿತು. ಯು ಮುಂಬಾ ತಂಡದ ಡಿಫೆಂಡರ್‌ಗಳಾದ ಮೋಹಿತ್ ಚಿಲ್ಲಾರ್ ಹಾಗೂ ಇರಾನ್ ಆಟಗಾರ ಫಜಲ್ ಅತ್ರಾಚಲಿ ಅವರ ಬಲಿಷ್ಠ ಟ್ಯಾಕಲ್‌ಗಳ ಎದುರು ತಬ್ಬಿಬ್ಬಾದ ಬುಲ್ಸ್ ರೈಡರ್‌ಗಳು ಅಂಕಗಳಿಸುವಲ್ಲಿ ಸತತ ನಿರಾಸೆ ಅನುಭವಿಸಿದರು. ಇದರ ಲಾಭ ಪಡೆದ ಹಾಲಿ ಚಾಂಪಿಯನ್ಸ್ 10ನೇ ನಿಮಿಷದಲ್ಲಿ ಬುಲ್ಸ್ ಪಡೆಯನ್ನು ಆಲ್‌ಔಟ್ ಮಾಡುವಲ್ಲಿ ಯಶಸ್ವಿಯಾಗಿ 10-2 ಅಂತರದ ಭರ್ಜರಿ ಮುನ್ನಡೆ ತನ್ನದಾಗಿಸಿಕೊಂಡಿತು. ಆಲ್‌ಔಟ್ ಬಳಿಕ ಕೊಂಚ ಚೇತರಿಕೆ ಪಡೆದ ಬುಲ್ಸ್, ಡಿಫೆನ್ಸ್‌ನಲ್ಲಿ ಹೋರಾಟ ನಡೆಸಿದರೂ ರೈಡರ್‌ಗಳ ಫೈಫಲ್ಯದ ಕಾರಣ ಅಂಕಗಳಿಸಲು ತಡಬಡಾಯಿಸಿತು. ಪರಿಣಾಮ ಮೊದಲಾರ್ಧ 05-16 ಅಂಕಗಳಿಂದ ಮುಂಬಯಿ ಮೇಲುಗೈಗೆ ಸಾಕ್ಷಿಯಾಯಿತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ