ಆ್ಯಪ್ನಗರ

PKL 2019: ರೋಹಿತ್ 'ಗೂಳಿ'ಯ ಹಾರಾಟಕ್ಕೆ ಶರಣಾದ ಯೋಧಾ

ಪ್ರೊ ಕಬಡ್ಡಿ 2019 ಟೂರ್ನಮೆಂಟ್‌ನಲ್ಲಿ ಗುಜರಾತ್ ಫಾರ್ಚ್ಯುನ್ ಜೈಂಟ್ಸ್ ತಂಡವು ಭರ್ಜರಿ ಓಟವನ್ನು ಮುಂದುವರಿಸಿದ್ದು, ಯುಪಿ ಯೋಧಾ ವಿಿರುದ್ಧ 44-19ರ ಅಂತರದಲ್ಲಿ ಗೆಲುವು ದಾಖಲಿಸಿದೆ.

Vijaya Karnataka Web 26 Jul 2019, 9:34 pm
ಹೈದರಾಬಾದ್: ಪ್ರೊ ಕಬಡ್ಡಿ ಏಳನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಯುಪಿ ಯೋಧಾ ವಿರುದ್ಧ ಗುಜರಾತ್ ಫಾರ್ಚ್ಯುನ್‌ಜೈಂಟ್ಸ್ 44-19ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web gujarat-vs-up


ಇದರೊಂದಿಗೆ ಗುಜರಾತ್ ಫಾರ್ಚ್ಯುನ್‌ಜೈಂಟ್ಸ್ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಅತ್ತ ಯುಪಿ ಯೋಧಾ ಸತತ ಎರಡನೇ ಸೋಲಿಗೆ ಶರಣಾಗಿದೆ.

ಪಟನಾ ಪೈರೇಟ್ಸ್ ವಿರುದ್ಧ ಪಲ್ಟಿ ಹೊಡೆದ ತೆಲುಗು ಟೈಟಾನ್ಸ್

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ಮೆರೆದ ಗುಜರಾತ್ ತಂಡವು ಎದುರಾಳಿಗಳ ಮೇಲೆ ಸವಾರಿ ಮಾಡಿದರು.

ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಫಾರ್ಚ್ಯುನ್‌ಜೈಂಟ್ಸ್ ಪ್ರಥಮಾರ್ಧದಲ್ಲಿ 19-9ರ ಅಂತರದ ಮುನ್ನಡೆ ಕಾಯ್ದುಕೊಂಡಿತು. ಬಳಿಕ ದ್ವಿತಿಯಾರ್ಧದಲ್ಲೂ ಅಧಿಪತ್ಯವನ್ನು ಮುಂದುವರಿಸಿದರು.

ಗುಜರಾತ್ ಫಾರ್ಚ್ಯುನ್‌ಜೈಂಟ್ಸ್ ಗೆಲುವಿನ ಹೀರೊ ಎನಿಸಿಕೊಂಡ ರೈಡರ್ ರೋಹಿತ್ ಗೂಳಿಯ 11 ಅಂಕಗಳನ್ನು ಕಲೆ ಹಾಕಿದರು. ಇವರಿಗೆ ತಕ್ಕ ಸಾಥ್ ನೀಡಿದ ಸಚಿನ್ ಆರು ಅಂಕಗಳನ್ನು ಪಡೆದರು.

ರಕ್ಷಣೆಯಲ್ಲೂ ಫಾರ್ಚ್ಯುನ್‌ಜೈಂಟ್ಸ್ ಪಡೆ ಅಚ್ಚುಕಟ್ಟಾದ ಪ್ರದರ್ಶನ ನೀಡಿದರು. ಪರ್ವೆಶ್ ಬೈನ್‌ಸ್ವಾಲ್ ಆರು ಅಂಕಗಳನ್ನು ಪಡೆದು ಮಿಂಚಿದರು. ಇನ್ನೊಂದೆಡೆ ಯುಪಿ ಯೋಧಾ ಪರ ಶ್ರೀಕಾಂತ್ ಜಾಧವ್ ಐದು ಅಂಕಗಳನ್ನಷ್ಟೇ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌