ಆ್ಯಪ್ನಗರ

Under 20 World Athletics: ಚಿನ್ನ ಗೆದ್ದು ಇತಿಹಾಸ ರಚಿಸಿದ ಹಿಮಾ ದಾಸ್

ಭಾರತದ ಉದಯೋನ್ಮುಖ ಓಟಗಾರ್ತಿ ಹಿಮಾ ದಾಸ್‌, ಇಲ್ಲಿ ನಡೆಯುತ್ತಿರುವ ಐಎಎಎಫ್‌ 20ರ ವಯೋಮಿತಿಯ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

TOI.in 13 Jul 2018, 12:54 pm
ಟ್ಯಾಂಪೆರ್‌: ಭಾರತದ ಉದಯೋನ್ಮುಖ ಓಟಗಾರ್ತಿ ಹಿಮಾ ದಾಸ್‌, ಇಲ್ಲಿ ನಡೆಯುತ್ತಿರುವ ಐಎಎಎಫ್‌ 20ರ ವಯೋಮಿತಿಯ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
Vijaya Karnataka Web hima-das-01


ಅಥ್ಲೀಟಿಕ್ಸ್ ವಿಭಾಗದಲ್ಲಿ (ಟ್ರ್ಯಾಕ್‌ ವಿಭಾಗದಲ್ಲಿ) ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಳು ಎಂಬ ಕೀರ್ತಿಗೆ ಹಿಮಾ ದಾಸ್ ಪಾತ್ರವಾಗಿದ್ದಾರೆ.

ಫಿನ್ಲೆಂಡ್‌ನ ಟ್ಯಾಂಪರ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 18ರ ಹರೆಯದ ಹಿಮಾ 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.


ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (52.07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 ಸೆಕೆಂಡು) ಕಂಚಿನ ಪದಕಕ್ಕೆ ಅರ್ಹವಾದರು.


ಬುಧವಾರ ನಡೆದ ಸೆಮಿಫೈನಲ್‌ನಲ್ಲಿ 52.10 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಹಿಮಾ ತಮ್ಮದೇ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 400 ಮೀಟರ್ ಫೈನಲ್‌ನಲ್ಲಿ 51.32 ಸೆಕೆಂಡುಗಳಲ್ಲಿ ಗುರಿ ತಲುಪಿದ ಈ ಅಸ್ಸಾಂ ಸ್ಪ್ರಿಂಟರ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಇನ್ನು ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 51.13 ಸೆಕೆಂಡುಗಳಲ್ಲಿ 400 ಮೀಟರ್ ಗುರಿ ಕ್ರಮಿಸಿದ್ದರು.

ಪ್ರಸ್ತುತ ಹಿಮಾ ಸಾಧನೆಯನ್ನು ಮೆಚ್ಚಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಶ್ಲಾಘನೆ ಮಾಡಿದ್ದಾರೆ. ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್ ಸೇರಿದಂತೆ ಅನೇಕ ಗಣ್ಯರು ಸಹ ಭೇಷ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌