ಆ್ಯಪ್ನಗರ

ಭಾರತ-ಐರ್ಲೆಂಡ್‌ ಪಂದ್ಯ ಡ್ರಾ

ಆತಿಥೇಯ ಸ್ಪೇನ್‌ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ, ಶನಿವಾರ 2018ರ ಮಹಿಳಾ ವಿಶ್ವಕಪ್‌ ಬೆಳ್ಳಿ ಪದಕ ವಿಜೇತ ಐರ್ಲೆಂಡ್‌ ತಂಡದ ವಿರುದ್ಧದ ಸರಣಿಯ ಮೊದಲ ಹಣಾಹಣಿಯಲ್ಲಿ ಡ್ರಾಗೆ ಸಮಾಧಾನಪಟ್ಟುಕೊಂಡಿದೆ.

Agencies 3 Feb 2019, 5:00 am
ಮುರ್ಸಿಯಾ (ಸ್ಪೇನ್‌) : ಆತಿಥೇಯ ಸ್ಪೇನ್‌ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ, ಶನಿವಾರ 2018ರ ಮಹಿಳಾ ವಿಶ್ವಕಪ್‌ ಬೆಳ್ಳಿ ಪದಕ ವಿಜೇತ ಐರ್ಲೆಂಡ್‌ ತಂಡದ ವಿರುದ್ಧದ ಸರಣಿಯ ಮೊದಲ ಹಣಾಹಣಿಯಲ್ಲಿ ಡ್ರಾಗೆ ಸಮಾಧಾನಪಟ್ಟುಕೊಂಡಿದೆ.
Vijaya Karnataka Web hockey india draw 1 1 with ireland
ಭಾರತ-ಐರ್ಲೆಂಡ್‌ ಪಂದ್ಯ ಡ್ರಾ


ಮೊದಲ ಕ್ವಾರ್ಟರ್‌ನ 4ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಟಿಸುವ ಮೂಲಕ ಭಾರತ ಉತ್ತಮ ಆರಂಭ ಕಂಡರೂ ಆತಿಥೇಯ ತಂಡದ ದಿಟ್ಟ ರಕ್ಷ ಣೆಯಿಂದಾಗಿ ಮುನ್ನಡೆ ಗಳಿಸುವಲ್ಲಿ ವಿಫಲಗೊಂಡಿತು. ದ್ವಿತೀಯ ಕ್ವಾರ್ಟರ್‌ನ ಆರಂಭದಲ್ಲೇ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಭಾರತ ಮತ್ತೆ ಕೈಚೆಲ್ಲಿತು. ಕೊನೆಗೂ 18ನೇ ನಿಮಿಷದಲ್ಲಿ ಡ್ರ್ಯಾಗ್‌ಫ್ಲಿಕ್ಕರ್‌ ಗುರ್ಜಿತ್‌ ಕೌರ್‌ ನೆರವಿನಿಂದ ಭಾರತ 1-0 ಮುನ್ನಡೆ ಕಂಡುಕೊಂಡಿತು. ಆದರೆ, 45ನೇ ನಿಮಿಷದಲ್ಲಿ ಐರ್ಲೆಂಡ್‌ 1-1ರ ಸಮಬಲ ಸ್ಥಾಪಿಸಿತು. ಆ ಬಳಿಕ ಪಂದ್ಯದ ಕೊನೆಯ ತನಕ ಗೋಲ್‌ ದಾಖಲಾಗಲಿಲ್ಲ. ಭಾನುವಾರ 2ನೇ ಪಂದ್ಯ ನಡೆಯಲಿದೆ. ಇದು ಸ್ಪೇನ್‌ ಪ್ರವಾಸದಲ್ಲಿ ಭಾರತದ ಕೊನೇ ಪಂದ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌