ಆ್ಯಪ್ನಗರ

ಹಾಕಿ ವಿಶ್ವ ಲೀಗ್‌: ಜರ್ಮನಿ ಮಣಿಸಿದ ಭಾರತಕ್ಕೆ ಕಂಚಿನ ಪದಕ

ಭುವನೇಶ್ವರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯಭೇರಿ.

Vijaya Karnataka Web 10 Dec 2017, 7:18 pm
ಭುವನೇಶ್ವರ: ಅತ್ಯಂತ ಸಮಯೋಚಿತ ಆಕ್ರಮಣಕಾರಿ ಆಟವಾಡಿದ ಭಾರತ ಹಾಕಿ ತಂಡ ಜರ್ಮನಿ ತಂಡದ ವಿರುದ್ಧ ಜಯ ಗಳಿಸಿ ಕಂಚಿನ ಪದಕ ಗಳಿಸಿದೆ.
Vijaya Karnataka Web hockey world league final india beat germany 2 1 to win bronze
ಹಾಕಿ ವಿಶ್ವ ಲೀಗ್‌: ಜರ್ಮನಿ ಮಣಿಸಿದ ಭಾರತಕ್ಕೆ ಕಂಚಿನ ಪದಕ


ಭುವನೇಶ್ವರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಹಾಕಿ ತಂಡದ ಪರವಾಗಿ ಎಸ್‌ವಿ ಸುನಿಲ್‌ (20), ಹರ್‌ಮನ್‌ ಪ್ರೀತ್‌ ಸಿಂಗ್ (54) ಗಳಿಸಿದ ಗೋಲುಗಳ ನೆರವಿನಿಂದ ಜರ್ಮನಿ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿತು.

ಜರ್ಮನಿ ತಂಡದ ಪರವಾಗಿ ಮಾರ್ಕ್‌ ಆಪಲ್‌ (36) ಗೋಲು ಗಳಿಸಿದರು.

ಪಂದ್ಯ ಆರಂಭವಾದ 20ನೇ ನಿಮಿಷದಲಲ್ಇಯೇ ಸುನಿಲ್ ಗೋಲು ಗಳಿಸಿದರು. ಮೊದಲಾರ್ಧದಲ್ಲಿ ಮುನ್ನಡೆ ಹೊಂದಿದ್ದ ಭಾರತ ದ್ವಿತೀಯಾರ್ಧದ ಆರಂಭದಲ್ಲಿಯೇ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟಿತು. ಮಾರ್ಕ್‌ ಗಳಿಸಿದ ಗೋಲಿನಿಂದ ಪಂದ್ಯ ಸಮಸ್ಥಿತಿಗೆ ತಲುಪಿತು.

ನಂತರ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡ 54ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಮುನ್ನಡೆ ಪಡೆಯಿತು. ಇದೇ ಮುನ್ನಡೆಯನ್ನು ಕಡೆಯವರೆಗೂ ಕಾಪಾಡಿಕೊಂಡು ಬಂದ ಭಾರತ ಜಯ ಸಾಧಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌