ಆ್ಯಪ್ನಗರ

ದಾಖಲೆ ಚಿನ್ನಕ್ಕೆ ಗುರಿಯಿಟ್ಟ ಅಪೂರ್ವಿ

ಭಾರತದ ಅಪೂರ್ವಿ ಚಾಂಡೆಲಾ ಐಎಸ್‌ಎಸ್‌ಎಫ್‌ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.

PTI 24 Feb 2019, 5:00 am
ಹೊಸದಿಲ್ಲಿ : ಭಾರತದ ಅಪೂರ್ವಿ ಚಾಂಡೆಲಾ ಐಎಸ್‌ಎಸ್‌ಎಫ್‌ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.
Vijaya Karnataka Web incredible chandela shoots gold with world record
ದಾಖಲೆ ಚಿನ್ನಕ್ಕೆ ಗುರಿಯಿಟ್ಟ ಅಪೂರ್ವಿ


ಇಲ್ಲಿನ ಕರ್ಣಿ ಸಿಂಗ್‌ ರೇಂಜ್‌ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ನಿಖರ ಗುರಿ ಕಾಯ್ದುಕೊಂಡ 26 ವರ್ಷದ ಅಪೂರ್ವಿ 252.9 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದರು. ಚೀನಾದ ರುವಾಝು ಝಾವೋ (251.8) ಮತ್ತು ಹಾಂಕ್‌ ಕ್ಸು (230.4) ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಕಳೆದ ಏಪ್ರಿಲ್‌ನಲ್ಲಿ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಝಾವೋ 252.4 ಅಂಕ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಎಂಟು ಶೂಟರ್‌ಗಳಿದ್ದ ಫೈನಲ್‌ನಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ ಅಪೂರ್ವಿ, ಝಾವೋಗಿಂತ 1.1 ಅಂಕ ಹೆಚ್ಚು ಪಡೆದು ವಿಶ್ವ ದಾಖಲೆ ತಿದ್ದಿಬರೆದರು.

10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಚಾಂಡೇಲಾ ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ ಕೋಟಾ ಗಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌