ಆ್ಯಪ್ನಗರ

ಕಿರಿಯರ ಫುಟ್ಬಾಲ್‌: ಭಾರತ ತಂಡಕ್ಕೆ ಜಯ

ಥಾಯ್ಲೆಂಡ್‌ ಪ್ರವಾಸದಲ್ಲಿರುವ ಹದಿನಾರು ವರ್ಷದೊಳಗಿನವರ ಭಾರತ ಫುಟ್ಬಾಲ್‌ ತಂಡ, ಶುಕ್ರವಾರ ನಡೆದ ಪ್ರದರ್ಶನ ಪಂದ್ಯದಲ್ಲಿ 17 ವರ್ಷದೊಳಗಿನವರ ಬುರಿರಾಮ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿದೆ.

Vijaya Karnataka 14 Jul 2018, 10:12 am
ಹೊಸದಿಲ್ಲಿ: ಥಾಯ್ಲೆಂಡ್‌ ಪ್ರವಾಸದಲ್ಲಿರುವ ಹದಿನಾರು ವರ್ಷದೊಳಗಿನವರ ಭಾರತ ಫುಟ್ಬಾಲ್‌ ತಂಡ, ಶುಕ್ರವಾರ ನಡೆದ ಪ್ರದರ್ಶನ ಪಂದ್ಯದಲ್ಲಿ 17 ವರ್ಷದೊಳಗಿನವರ ಬುರಿರಾಮ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿದೆ.
Vijaya Karnataka Web football


ಪಂದ್ಯದ ಉಭಯ ಅವಧಿಗಳಲ್ಲಿ ಪ್ರಾಬಲ್ಯ ಮೆರೆದ ಭಾರತ ತಂಡದ ಪರ ಭುವನೇಶ್‌ 3ನೇ ನಿಮಿಷದಲ್ಲಿ ಗೋಲ್‌ ಗಳಿಸಿದರೆ, ರೋಹಿತ್‌ ದನು 83ನೇ ನಿಮಿಷದಲ್ಲಿ ತಂಡದ ಎರಡನೇ ಗೋಲ್‌ ಗಳಿಸಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು.

ಪ್ರಥಮಾರ್ಧಕ್ಕೆ ಭಾರತ 1-0 ಅಂತರದ ಮುನ್ನಡೆ ಗಳಿಸಿ ಮೇಲುಗೈ ಸಾಧಿಸಿದರಲ್ಲದೆ ದ್ವಿತೀಯಾರ್ಧದಲ್ಲೂ ತಮ್ಮ ಹಿಡಿತ ಕಾಯ್ದುಕೊಂಡರು. ಭಾರತ ಇದೇ 17ರಂದು 17 ವರ್ಷದೊಳಗಿನವರ ಬ್ಯಾಂಕಾಕ್‌ ಗ್ಲಾಸ್‌ ಎಫ್‌ಸಿ ತಂಡದ ವಿರುದ್ಧ ಕಣಕ್ಕಿಳಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌