ಆ್ಯಪ್ನಗರ

ಕೊರಿಯಾ ವಿರುದ್ಧ ಭಾರತೀಯ ವನಿತೆಯರಿಗೆ ಗೆಲುವು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೆನ್ನಲ್ಲೇ ಅಮೋಘ ನಿರ್ವಹಣೆ ನೀಡಿರುವ ಭಾರತೀಯ ಮಹಿಳಾ ಹಾಕಿ ತಂಡವು, ದಕ್ಷಿಣ ಕೊರಿಯಾ ವಿರುದ್ಧ 3-1ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

TIMESOFINDIA.COM 9 Mar 2018, 3:04 pm
ಸಿಯೋಲ್: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೆನ್ನಲ್ಲೇ ಅಮೋಘ ನಿರ್ವಹಣೆ ನೀಡಿರುವ ಭಾರತೀಯ ಮಹಿಳಾ ಹಾಕಿ ತಂಡವು, ದಕ್ಷಿಣ ಕೊರಿಯಾ ವಿರುದ್ಧ 3-1ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web india women beat korea 3 1 take unassailable lead
ಕೊರಿಯಾ ವಿರುದ್ಧ ಭಾರತೀಯ ವನಿತೆಯರಿಗೆ ಗೆಲುವು


ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3-1ರ ಅಂತರದ ಗೆಲುವು ದಾಖಲಿಸಿದೆ.

ಜಿನ್‌ಚನ್ ಅಥ್ಲೇಟಿಕ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿಶ್ವ 10 ನಂಬರ್ ರ‍್ಯಾಂಕ್‌ನ ಭಾರತೀಯ ವನಿತಾ ಪಡೆಯು ತನಗಿಂತಲೂ ಉತ್ತಮ ಶ್ರೇಯಾಂಕ ಹೊಂದಿರುವ ದಕ್ಷಿಣ ಕೊರಿಯಾ ಮೇಲೆ ಸವಾರಿ ಮಾಡಿತು.

ಭಾರತದ ಪರ ಗುರ್ಜಿತ್ ಕೌರ್ (2ನೇ ನಿಮಿಷ), ದೀಪಿಕಾ (14ನೇ ನಿಮಿಷ) ಹಾಗೂ ಪೂನಂ ರಾಣಿ (47ನೇ ನಿಮಿಷ) ಗೆಲುವಿನ ಗೋಲುಗಳನ್ನು ದಾಖಲಿಸಿದರು.

ಅತ್ತ ಆತಿಥೇಯ ತಂಡದ ಪರ 57ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮಿ ಹ್ಯುನ್ ಪಾರ್ಕ್ ಸೋಲಿನ ಅಂತರವನ್ನು ತಗ್ಗಿಸಿದರು.

ಸರಣಿಯ ಕೊನೆಯ ಪಂದ್ಯ ಮಾರ್ಚ್ 11 ಭಾನುವಾರದಂದು ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌