ಬರಿಗೈಯಲ್ಲಿ ಮರಳಿದ ಆರ್ಚರಿ ಪಟುಗಳು
ಭಾರತದ ಆರ್ಚರಿ ಪಟುಗಳು 'ಆರ್ಚರಿ ವಿಶ್ವಕಪ್ 2ನೇ ಹಂತ'ದಲ್ಲಿ ಒಂದೂ ಪದಕ ಗಳಿಸದೇ ಭಾರತಕ್ಕೆ ವಾಪಸಾಗಿದ್ದಾರೆ.
PTI 11 May 2019, 5:00 am
ಶಾಂಘೈ : ಭಾರತದ ಆರ್ಚರಿ ಪಟುಗಳು 'ಆರ್ಚರಿ ವಿಶ್ವಕಪ್ 2ನೇ ಹಂತ'ದಲ್ಲಿ ಒಂದೂ ಪದಕ ಗಳಿಸದೇ ಭಾರತಕ್ಕೆ ವಾಪಸಾಗಿದ್ದಾರೆ. ಸ್ಪರ್ಧೆಯ ಅಂತಿಮ ದಿನವಾದ ಶುಕ್ರವಾರ ರಿಕರ್ವ್ ವಿಭಾಗದಲ್ಲಿ ಭಾರತದ ಜಗದೀಶ್ ಚೌಧರಿ ಮತ್ತು ಪ್ರೀತಿ ಜೋಡಿ ಅಮೆರಿಕದ ಬ್ರಾಡಿ ಎಲಿಸನ್ ಮತ್ತು ಎರಿನ್ ಮಿಕೆಲ್ಬರಿ ಜೋಡಿ ವಿರುದ್ಧ ಹಾಗೂ ಕಾಂಪೌಂಡ್ ವಿಭಾಗದಲ್ಲಿ ಪ್ರವೀಣ್ ಕುಮಾರ್ ಮತ್ತು ಪವೀರ್ನಾ ಜೋಡಿ ಮಲೇಷ್ಯಾ ಜೋಡಿ ಎದುರು ಸೋಲುವುದರೊಂದಿಗೆ ಭಾರತ ನಿರಾಶಾದಾಯಕವಾಗಿ ಹೋರಾಟ ಮುಗಿಸಿತು. ರಿಕರ್ವ್ ಮತ್ತು ಕಾಂಪೌಂಡ್ ವಿಭಾಗಗಳ ವೈಯಕ್ತಿಕ ಮತ್ತು ತಂಡ ವಿಭಾಗಗಳ ಸ್ಪರ್ಧೆಯಲ್ಲಿ ಭಾರತೀಯರು ಇದಕ್ಕೂ ಮೊದಲೇ ಸೋತಿದ್ದರು.
ಘ್ಕಿ
ಘ್ಕಿ