ಆ್ಯಪ್ನಗರ

ಭಾರತಕ್ಕೆ ಒಮನ್‌ ಸವಾಲು

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೂ ಮುನ್ನ ಭಾರತ ತಂಡ ಡಿ.27ರಂದು ಒಮನ್‌ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್‌ ಪಂದ್ಯವನ್ನಾಡಲಿದೆ ಎಂದು ರಾಷ್ಟ್ರೀಯ ಫುಟ್ಬಾಲ್‌ ಒಕ್ಕೂಟ ಸೋಮವಾರ ತಿಳಿಸಿದೆ.

PTI 27 Nov 2018, 5:00 am
ಹೊಸದಿಲ್ಲಿ : ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೂ ಮುನ್ನ ಭಾರತ ತಂಡ ಡಿ.27ರಂದು ಒಮನ್‌ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್‌ ಪಂದ್ಯವನ್ನಾಡಲಿದೆ ಎಂದು ರಾಷ್ಟ್ರೀಯ ಫುಟ್ಬಾಲ್‌ ಒಕ್ಕೂಟ ಸೋಮವಾರ ತಿಳಿಸಿದೆ.
Vijaya Karnataka Web indian football team to play against oman just before asian cup
ಭಾರತಕ್ಕೆ ಒಮನ್‌ ಸವಾಲು


ಯುಎಇನ ಮೂರು ನಗರಗಳಲ್ಲಿ ಜನವರಿ 5ರಿಂದ ಫೆಬ್ರವರಿ 1ರವರೆಗೆ ಏಷ್ಯಾ ಕಪ್‌ ಟೂರ್ನಿ ನಡೆಯಲಿದೆ. ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ 'ಎ' ಗುಂಪಿನಲ್ಲಿದ್ದು, ಒಮಾನ್‌ ತಂಡ 'ಎಫ್‌' ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಜ.6ರಂದು ಅಬುಧಾಬಿಯಲ್ಲಿ ಪೈಪೋಟಿ ನಡೆಸಲಿದೆ.

ಅಕ್ಟೋಬರ್‌ನಲ್ಲಿ ಪ್ರಕಟಗೊಂಡ ಫಿಫಾ ರಾರ‍ಯಂಕಿಂಗ್‌ ಅನುಗುಣವಾಗಿ ಒಮನ್‌ 84ನೇ ರಾರ‍ಯಂಕ್‌ ಹೊಂದಿದ್ದು, ಭಾರತ ತಂಡ 97ನೇ ಸ್ಥಾನದಲ್ಲಿದೆ. ಭಾರತ 'ಎ' ಗುಂಪಿನಲ್ಲಿ ಬಹರೇನ್‌ ಮತ್ತು ಆತಿಥೇಯ ಯುಎಎಇ ವಿರುದ್ಧವೂ ಪೈಪೋಟಿ ನಡೆಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌