ಆ್ಯಪ್ನಗರ

ಟೋಕಿಯೊ ಒಲಿಂಪಿಕ್ಸ್‌ನಿಂದ ಬಹುತೇಕ ಹೊರಬಿದ್ದ ಭಾರತದ ಸ್ಟಾರ್‌ ಜಿಮ್ನಾಸ್ಟಿಕ್ಸ್‌ ಪಟು!

ಭಾರತದ ಸ್ಟಾರ್‌ ಜಿಮ್ನಾಸ್ಟ್‌ ದೀಪಾ ಕರ್ಮಕಾರ್‌, ಮಂಡಿ ನೋವಿನ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸದೇ ಇರುವ ಹಿನ್ನೆಲೆಯಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಅನುಮಾನವಾಗಿದೆ.

Vijaya Karnataka Web 17 Sep 2019, 5:35 pm
ಹೊಸದಿಲ್ಲಿ, ಸೆಪ್ಟೆಂಬರ್‌ 17: ಟೋಕಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳುಗಳಷ್ಟೇ ಬಾಕಿ ಇದ್ದು, ಭಾರತದ ಸ್ಟಾರ್‌ ಜಿಮ್ನಾಸ್ಟ್‌ ದೀಪಾ ಕರ್ಮಕಾರ್‌ ಮಂಡಿ ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸುವಲ್ಲಿ ವಿಫಲರಾಗಿದ್ದಾರೆ.
Vijaya Karnataka Web deepa karmakar 2019


ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತಿನ ಸ್ಪರ್ಧೆಯಾಗಿರುವ ಎಫ್‌ಐಜಿ ವಿಶ್ವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ ಅಕ್ಟೋಬರ್‌ನಲ್ಲಿ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ನಡೆಯಲಿದ್ದು, ದೀಪಾ ಇದರಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಬಹುತೇಕ ಕಳೆದುಕೊಂಡಂತಾಗಲಿದೆ.

ಭಾರತ vs ದಕ್ಷಿಣ ಆಫ್ರಿಕಾ 2ನೇ ಟಿ20 ಕದನ: ಟೀಮ್‌ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್‌ XI

ದೀಪಾ ಗುಣಮುಖರಾಗಲು ಇನ್ನು ಎರಡು ತಿಂಗಳ ಸಮಯ ಬೇಕಾಗುವುದಾಗಿ ದೀರ್ಘಕಾಲದ ಕೋಚ್‌ ಬಿಸ್ವೇಶ್ವರ್‌ ನಂದಿ ತಿಳಿಸಿದ್ದು, ಇದೇ ಸಂದರ್ಭದಲ್ಲಿ ದೀಪಾಗೆ ದಿಲ್ಲಿಯಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಜಿಮ್ನಾಸ್ಟಿಕ್ಸ್‌ ಒಕ್ಕೂಟ ನೀಡಿದ್ದ ಅಧಿಸೂಚನೆಯನ್ನು ಖಂಡಿದ್ದಾರೆ.

ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಒಲಿಂಪಿಕ್‌ ಪದಕ ವಿಜೇತೆಗೆ ಮಣ್ಣು ಮುಕ್ಕಿಸಿದ ವಿನೇಶ್‌ ಫೋಗಾಟ್‌

"ಟ್ರಯಲ್ಸ್‌ಗೆ ಆಹ್ವಾನಿಸಲು ಇದು ಒಂದು ರೀತಿಯೇ? ದೀಪಾ ಅವರ ಗಾಯದ ಸಮಸ್ಯೆ ಒಂದೆಡೆ ಇರಲಿ. ಶನಿವಾರವಷ್ಟೇ ಟ್ರಯಲ್ಸ್‌ಗೆ ಆಹ್ವಾನ ನೀಡಿ ಸೋಮವಾರ ಹಾಜರಾಗುವಂತೆ ಹೇಳಿದರೆ, ಇಷ್ಟು ಕಡಿಮೆ ಸಮಯದಲ್ಲಿ ತ್ರಿಪುರಾದಿಂದ ದಿಲ್ಲಿಗೆ ದೀಪಾ ಬರುವುದಾದರೂ ಹೇಗೆ. ತ್ರಿಪುರಾದಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ದಿಲ್ಲಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡವರೆಲ್ಲರೂ ದಿಲ್ಲಿಯಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದವರು. ಜೊತೆಗೆ ಅಧಿಸೂಚನೆಯಲ್ಲಿ ಸಾಯ್‌ ಅಧಿಕಾರಿಗಳ ಸಹಿಯೂ ಇಲ್ಲ. ಹೀಗಿರುವಾಗಿ ಇದು ಸಾಯ್‌ ಅಧಿಕೃತವಾಗಿ ಹೊರಡಿಸಿರುವ ಅಧಿಸೂಚನೆ ಎಂದು ನಾವು ನಂಬುವುದಾದರೂ ಹೇಗೆ? ಬೇರೆ ಯಾರಾದರೂ ಕಳುಹಿಸಿರಬಹುದಲ್ಲವೇ," ಎಂದು ಬಿಸ್ವೇಶ್ವರ್‌ ನಂದಿ ಆಕ್ರೋಶ ಹೊರಹಾಕಿದ್ದಾರೆ.

"ಈ ವಿಚಾರವಾಗಿ ಭಾರತೀಯ ಜಿಮ್ನಾಸ್ಟಿಕ್ಸ್‌ ಒಕ್ಕೂಟದ ಅಧಿಕಾರಿಗಳನ್ನು ಫೋನ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಯಾರೊಬ್ಬರೂ ಉತ್ತರಿಸುತ್ತಿಲ್ಲ," ಎಂದು ನಂದಿ ಆರೋಪಿಸಿದ್ದಾರೆ.

ಇಂಗ್ಲೆಂಡ್‌ ವಿಶ್ವಕಪ್‌ ಹೀರೊ ಬೆನ್‌ ಸ್ಟೋಕ್ಸ್‌ ಯುವ ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಹೇಳಿದ್ದಿದು!

ಒಲಿಂಪಿಕ್ಸ್‌ಗೆ ಅರ್ಹತೆ ಕಷ್ಟ
ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್‌ಗೆ ದೀಪಾ ಅರ್ಹತೆ ಪಡೆಯುವುದು ಕಷ್ಟವೆಂದು ನಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಏಕೆಂದರೆ ಸ್ಟಟ್‌ಗಾರ್ಟ್‌ನಲ್ಲಿ ನಡೆಯಲಿರುವ ವಿಶ್ವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ ಒಂದೇ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ಇದ್ದ ಅತ್ಯುತ್ತಮ ವೇದಿಕೆಯಾಗಿತ್ತು ಎಂದಿದ್ದಾರೆ.

"ಮುಂದಿನ ಮೂರು ವಿಶ್ವಕಪ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ತಂದುಕೊಡಲಿವೆ. ಮೂರೂ ವಿಶ್ವಕಪ್‌ಗಳಲ್ಲಿ ಚಿನ್ನ ಗೆದ್ದ ಜಿಮ್ನಾಸ್ಟ್‌ಗೆ ಮಾತ್ರವೇ ಅರ್ಹತೆ ಸಿಗಲಿದೆ. ನಿಜಕ್ಕೂ ಇದು ಬಹಳ ಕಷ್ಟ. ಆದರೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕಡೆಗೆ ದೀಪಾ ಅವರಿಗೆ ತರಬೇತಿ ನೀಡುತ್ತಿದ್ದೇನೆ," ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌