ಆ್ಯಪ್ನಗರ

ಹಾಕಿ: ಕೊರಿಯಾಗೆ ಶರಣಾದ ಭಾರತ

ಭಾರತದ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧದ ದ್ವಿಪಕ್ಷೀಯ ಹಾಕಿ ಸರಣಿಯ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋತಿದೆ. ಆದರೆ, ಇದರಿಂದ ರಾಣಿ ರಾಂಪಾಲ್‌ ನೇತೃತ್ವದ ಭಾರತ ತಂಡದ ಸರಣಿ ಗೆಲುವಿಗೇನೂ ಅಡ್ಡಿಯಾಗಲಿಲ್ಲ. ಇದಕ್ಕೂ ಮೊದಲು ನಡೆದ 2 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.

PTI 25 May 2019, 5:00 am
ಜಿಂಚಿಯಾನ್‌ : ಭಾರತದ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧದ ದ್ವಿಪಕ್ಷೀಯ ಹಾಕಿ ಸರಣಿಯ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋತಿದೆ. ಆದರೆ, ಇದರಿಂದ ರಾಣಿ ರಾಂಪಾಲ್‌ ನೇತೃತ್ವದ ಭಾರತ ತಂಡದ ಸರಣಿ ಗೆಲುವಿಗೇನೂ ಅಡ್ಡಿಯಾಗಲಿಲ್ಲ. ಇದಕ್ಕೂ ಮೊದಲು ನಡೆದ 2 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.
Vijaya Karnataka Web indian women lose 0 4 to korea
ಹಾಕಿ: ಕೊರಿಯಾಗೆ ಶರಣಾದ ಭಾರತ


ಆತಿಥೇಯ ದಕ್ಷಿಣ ಕೊರಿಯಾ ತಂಡ ಶುಕ್ರವಾರ ನಡೆದ 3ನೇ ಪಂದ್ಯದಲ್ಲಿ ಭಾರತ ತಂಡವನ್ನು 4-0 ಗೋಲ್‌ಗಳ ಅಂತರದಿಂದ ಹಿಮ್ಮೆಟ್ಟಿಸಿ ಸರಣಿ ಸೋಲಿನ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿತು. ರಾಣಿ ರಾಂಪಾಲ್‌ ಬಳಗ ಪಂದ್ಯದ ಆರಂಭದಿಂದಲೇ ಆತಿಥೇಯರ ದಾಳಿಗೆ ತುತ್ತಾಯಿತು. ಪ್ರವಾಸಿ ತಂಡದ ನಿರ್ಲಕ್ಷ ್ಯ ಮನೋಭಾವ ಮತ್ತು ರಕ್ಷ ಣಾ ನ್ಯೂನತೆಗಳನ್ನು ಸಮರ್ಥವಾಗಿ ಬಳಸಿಕೊಂಡ ಕೊರಿಯಾ 29, 41, 41 ಮತ್ತು 53ನೇ ನಿಮಿಷದಲ್ಲಿ 4 ಗೋಲ್‌ ಬಾರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌