ಆ್ಯಪ್ನಗರ

ಇಂಡೋನೇಷ್ಯಾ ಮಾಸ್ಟರ್ಸ್; ಫೈನಲ್‌ನಲ್ಲಿ ಮುಗ್ಗರಿಸಿದ ಸೈನಾ

ಇಲ್ಲಿ ನಡೆದ ಪ್ರತಿಷ್ಠಿತ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸೈನಾ ಹಿರಿಯ ಅನುಭವಿ ಆಟಗಾರ್ತಿ ಹಾಗೂ ವಿಶ್ವ ನಂ.12 ರ‍್ಯಾಂಕ್‌ನ ಸೈನಾ ನೆಹ್ವಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

TIMESOFINDIA.COM 28 Jan 2018, 6:10 pm
ಜಕರ್ತಾ: ಇಲ್ಲಿ ನಡೆದ ಪ್ರತಿಷ್ಠಿತ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸೈನಾ ಹಿರಿಯ ಅನುಭವಿ ಆಟಗಾರ್ತಿ ಹಾಗೂ ವಿಶ್ವ ನಂ.12 ರ‍್ಯಾಂಕ್‌ನ ಸೈನಾ ನೆಹ್ವಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
Vijaya Karnataka Web indonesia masters magician tai tzu proves sainas nemesis again
ಇಂಡೋನೇಷ್ಯಾ ಮಾಸ್ಟರ್ಸ್; ಫೈನಲ್‌ನಲ್ಲಿ ಮುಗ್ಗರಿಸಿದ ಸೈನಾ


ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ತೈವಾನ್‌ನ ಥೈ ಟ್ಜು ಯಿಂಗ್‌ ವಿರುದ್ಧ 9- 21 13-21ರ ಅಂತರದಲ್ಲಿ ಪರಾಭವಗೊಂಡರು.

3.5 ಲಕ್ಷ ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತದ ಟೂರ್ನಿಯಲ್ಲಿ ಸೈನಾ ಪ್ರಶಸ್ತಿ ಗೆಲುವಿನ ಸನಿಹ ತಲುಪಿ ಎಡವಿ ಬಿದ್ದಿದ್ದರು. ಈ ಮೂಲಕ ವಿಶ್ವದ ಅಗ್ರ ಕ್ರಮಾಂಕದ ಥೈ ಟ್ಜು ಯಿಂಗ್‌ ವಿರುದ್ಧ ಸತತ ಏಳನೇ ಸೋಲಿಗೊಳಗಾದರು. ಒಟ್ಟಿನಲ್ಲಿ ಕೊನೆಯ 10 ಮುಖಾಮುಖಿಯಲ್ಲಿ ಒಂಬತ್ತು ಬಾರಿ ಸೋಲು ಅನುಭವಿಸಿದ್ದಾರೆ.

ಸೈನಾ ಹೋರಾಟ ಕೇವಲ 27 ನಿಮಿಷಗಳಲ್ಲಿ ಕೊನೆಗೊಂಡಿತ್ತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ನಿರಾಸೆ ಅನುಭವಿಸಿದರು.

ಈ ಮೊದಲು ಕ್ವಾರ್ಟರ್ ಹಣಾಹಣಿಯಲ್ಲಿ ಭಾರತದವರೇ ಆಗಿರುವ ತಮ್ಮ ಸಹ ಆಟಗಾರ್ತಿ ಪಿವಿ ಸಿಂಧೂ ವಿರುದ್ಧ ಸೈನಾ ಗೆಲುವು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌