ಆ್ಯಪ್ನಗರ

ಮೋದಿ ಭೇಟಿ ಮಾಡಿಲ್ಲವೆಂದು ಬೇಸರವಿದೆ: ಫೀಫಾ ಅಧ್ಯಕ್ಷ

ಫಿಫಾ ವಿಶ್ವಕಪ್ ಕೂಟವನ್ನು ಭಾರತದಲ್ಲಿ ಯಶಸ್ಸಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ) ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅಭಿನಂದನಾ ಪತ್ರ ಬರೆದಿದ್ದಾರೆ.

TNN 6 Nov 2017, 10:15 pm
ಹೊಸದಿಲ್ಲಿ: ಕಿರಿಯರ ಫಿಫಾ ವಿಶ್ವಕಪ್ ಕೂಟವನ್ನು ಭಾರತದಲ್ಲಿ ಯಶಸ್ಸಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ) ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅಭಿನಂದನಾ ಪತ್ರ ಬರೆದಿದ್ದಾರೆ.
Vijaya Karnataka Web infantino regrets not meeting pm modi during fifa u 17 world cup
ಮೋದಿ ಭೇಟಿ ಮಾಡಿಲ್ಲವೆಂದು ಬೇಸರವಿದೆ: ಫೀಫಾ ಅಧ್ಯಕ್ಷ


ಕಳೆದ ತಿಂಗಳ 6ರಂದು ಆರಂಭವಾಗಿದ್ದ 2017ರ ಅಂಡರ್-17 ಫಿಫಾ ವಿಶ್ವಕಪ್ ಕೂಟದ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿರುವುದ ಜಿಯಾನಿ ಇನ್ಫಾಂಟಿನೋ, ಅಂಡರ್-17 ಫಿಫಾ ವಿಶ್ವಕಪ್ ಯೋಗವು ಅಭೂತಪೂರ್ವ ನೆನಪುಗಳೊಂದಿಗೆ ಜ್ಯೂರಿಶ್‌ಗೆ ತಲುಪಿದೆ ಎಂದು ಹೇಳಿದ್ದಾರೆ. .

ಅಂಡರ್-17 ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಸ್ಥಳೀಯ ಸಂಘಟನೆ ಮತ್ತು ಸರಕಾರಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಜಿಯಾನಿ ಹೇಳಿದ್ದು, ಕೋಲ್ಕೊತ್ತಾದಲ್ಲಿ ನಡೆದ ವಿಶ್ವಕಪ್‌ ಕೂಟದ ಅಂತಿಮ ಪಂದ್ಯದ ವೇಳೆ ಅನೇಕ ಮಿತ್ರರನ್ನು ಸಂಪಾಧಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಮೊದಲೇ ನಿಯೋಜನೆಗೊಂಡಿದ್ದ ಕೆಲಸದೊತ್ತಡದಿಂದಾಗಿ ಫಿಫಾ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಬರಲಾಗಲಿಲ್ಲ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಫುಟ್ಬಾಲ್‌ ಕ್ರೀಡೆಯಲ್ಲಿ ಭಾರತದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾತುಕತೆಗೆ ಮತ್ತೆ ಭಾರತಕ್ಕೆ ಬಂದು ಮೋದಿಯನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ್ದಾರೆ.

ಇದೇ ವೇಳೆ ಜಿಯಾನಿ ಇನ್ಫಾಂಟಿನೊ ಅಖಿಲ ಭಾರತ ಫೂಟ್‌ಬಾಲ್‌ ಒಕ್ಕೂಟಕ್ಕೆ ಧನ್ಯವಾದ ಸಲ್ಲಿಸಿದ್ದಾರೆ

infantino regrets not meeting pm modi during fifa u-17 world cup

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌