ಆ್ಯಪ್ನಗರ

ಇಂಡಿಯನ್‌ ಸೂಪರ್‌ ಲೀಗ್‌: ಕೊನೆಗೂ ಬೆಂಗಳೂರು ಎಫ್‌ಸಿಗೆ ಮೊದಲ ಗೆಲುವಿನ ಸಿಂಚನ

ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಖಾತೆ ತೆರೆದಿದೆ. ನಾಯಕ ಸುನಿಲ್ ಛೆಟ್ರಿ, ಎರಿಕ್ ಪಾರ್ಟಾಲು ಹಾಗೂ ಸಿಮೊಬಿ ಹಾಕಿಪ್ ಗಳಿಸಿದ ಗೋಲುಗಳ ಮೂಲಕ ಚೆನ್ನೈಯಿನ್ ಎಫ್ ಸಿ ವಿರುದ್ಧ ಬೆಂಗಳೂರು 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಯಶಸ್ಸಿನ ಖಾತೆ ತೆರೆದಿದೆ.

Vijaya Karnataka Web 10 Nov 2019, 10:36 pm
ಬೆಂಗಳೂರು: ಮಾಜಿ ಚಾಂಪಿಯನ್ನರ ವಿರುದ್ಧ ನೈಜ ಚಾಂಪಿಯನ್ನರಂತೆ ಆಟ ಪ್ರದರ್ಶಿಸಿದ ಬೆಂಗಳೂರು ಎಫ್ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಖಾತೆ ತೆರೆದಿದೆ. ನಾಯಕ ಸುನಿಲ್ ಛೆಟ್ರಿ, ಎರಿಕ್ ಪಾರ್ಟಾಲು ಹಾಗೂ ಸಿಮೊಬಿ ಹಾಕಿಪ್ ಗಳಿಸಿದ ಗೋಲುಗಳ ಮೂಲಕ ಚೆನ್ನೈಯಿನ್ ಎಫ್ಸಿ ವಿರುದ್ಧ ಬೆಂಗಳೂರು 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಯಶಸ್ಸಿನ ಖಾತೆ ತೆರೆದಿದೆ.
Vijaya Karnataka Web sunil Chhetri BFC v CFC 2019


ಎರಿಕ್ ಪಾರ್ಟಾಲು (14ನೇ ನಿಮಿಷ), ಸುನಿಲ್ ಛೆಟ್ರಿ (25ನೇ ನಿಮಿಷ) ಹಾಗೂ ಸಿಮೊಬಿ ಹಾಕಿಪ್ (84ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಪ್ರಥಮಾರ್ಧದಲ್ಲಿ ಬೆಂಗಳೂರು ೨-೦ ಅಂತರದಲ್ಲಿ ಮುನ್ನಡೆ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತ್ತು.

ISL: ಬೆಂಗಳೂರು ಎಫ್‌ಸಿ ಜಯ ಕಸಿದ ಕೊರೊಮಿನಾಸ್

ನಿರೀಕ್ಷೆಯಂತೆ ಬೆಂಗಳೂರು ಎಫ್ ಸಿ ಪ್ರವಾಸಿ ಚೆನ್ನೈಯಿನ್ ವಿರುದ್ಧ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು, ಎರಿಕ್ ಪಾರ್ಥಲು ಹಾಗೂ ಸುನಿಲ್ ಛೆಟ್ರಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. 14ನೇ ನಿಮಿಷದಲ್ಲಿ ಎರಿಕ್ ಪಾರ್ಥಲು ಗಳಿಸಿದ ಗೋಲಿನಿಂದ ಬೆಂಗಳೂರು ಮುನ್ನಡೆ ಕಂಡಿತು. ಪಾರ್ಥಲು ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ.

ಆಡಿದ ಮೊದಲ ಪಂದ್ಯದಲ್ಲೇ ಗೋಲು ಗಳಿಸಿ ಶುಭಾರಂಭ ಕಂಡರು. ಬೆಂಗಳೂರಿಗೆ ಈ ಮುನ್ನಡೆ ಅಗತ್ಯ ಇದ್ದಿತ್ತು. ಆ ಅಗತ್ಯವನ್ನು ಪಾರ್ಥಲು ಪೂರೈಸಿದರು. ನಾಯಕ ಛೆಟ್ರಿ ತಮ್ಮ ನೈಜ ಆಟ ಪ್ರದರ್ಶಿಸಲಿಲ್ಲ ಎಂಬ ಕೊರಗು ತಂಡವನ್ನು ಕಾಡಿತ್ತು. ಮೊದಲ ಪಂದ್ಯದಲ್ಲಿ ಗೋಲು ಗಳಿಸಿವಲ್ಲಿ ವಿಫಲವಾಗಿದ್ದರು. ಆದರೆ ಮನೆಯಂಗಣದ ಕೋಟೆಯಲ್ಲಿ ಛೆಟ್ರಿಯನ್ನು ನಿಯಂತ್ರಿಸುವುದು ಕಷ್ಟ. 25ನೇ ನಿಮಿಷದಲ್ಲಿ ರಫಾಯಲ್ ಅಗಸ್ಟೊ ನೀಡಿದ ಪಾಸ್ ಮೂಲಕ ಛೆಟ್ರಿ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು.

ನಾರ್ತ್‌ಈಸ್ಟ್ ಎಫ್‌ಸಿ ವಿರುದ್ಧ ಡ್ರಾದೊಂದಿಗೆ ಬಿಎಫ್‌ಸಿ ಅಭಿಯಾನ ಆರಂಭ

ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಖಾಮುಖಿಯಾಗುತ್ತಿದ್ದರೆ ಅಲ್ಲಿ ಫುಟ್ಬಾಲ್ ನ ನಿಜವಾದ ಸಂಭ್ರಮ ಮನೆಮಾಡುತ್ತದೆ. ಎರಡೂ ತಂಡಗಳಿಗೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಬೆಂಗಳೂರು ಆಡಿರುವ ಮೂರು ಪಂದ್ಯಗಳಲ್ಲಿ ಬರೇ ಡ್ರಾದ ರುಚಿ ಕಂಡಿದ್ದರೆ, ಚೆನ್ನೈ ಡ್ರಾದ ಜತೆಯಲ್ಲಿ ಸೋಲಿನ ಕಹಿ ಅನುಭವಿಸಿದೆ. ಬೆಂಗಳೂರು ಇದುವರೆಗೂ ಉತ್ತಮ ತಂಡಗಳ ವಿರುದ್ಧ ಆಡಿದೆ, ಆದರೆ ಹಾಲಿ ಚಾಂಪಿಯನ್ ರೀತಿಯಲ್ಲಿ ಅದು ತನ್ನ ಪ್ರದರ್ಶನ ತೋರಿಲ್ಲ.

ನಾಯಕ ಸುನಿಲ್ ಛೆಟ್ರಿ ಹಾಗೂ ಮ್ಯಾನುಯೆಲ್ ಒನ್ಯೂ ಇನ್ನೂ ನೈಜ ಆಟ ಪ್ರದರ್ಶಿಸಿಲ್ಲ. ತಂಡಕ್ಕೆ ಎರಿಕ್ ಪಾರ್ಥಲು ಸೇರಿಕೊಂಡಿರುವುದು ಬ್ಯಾಕ್ ಲೈನ್ ವಿಭಾಗದ ಶಕ್ತಿಯನ್ನು ಹೆಚ್ಚಿಸಿದೆ. ಮುಂಬೈ ಸಿಟಿ ಎಫ್ ಸಿ ವಿರುದ್ಧ ಡ್ರಾ ಸಾಧಿಸಿದ ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಫುಟ್ಬಾಲ್ ಆಡುತ್ತೆ ಈ ಆಕಳು; ವೀಡಿಯೋ ನೋಡಿ

ಎಲಿ ಸಾಬಿಯ ಹಾಗೂ ಲೂಸಿಯಾನ್ ಗೋಯನ್ ತಂಡದ ಪ್ರಮುಖ ಶಕ್ತಿ, ಆದರೆ ಅವರು ಇನ್ನೂ ತಮ್ಮ ನೈಜ ಆಟ ಪ್ರದರ್ಶಿಸಿಲ್ಲ. ಚೆನ್ನೈ ಇನ್ನೂ ಗೋಲು ಗಳಿಸಬೇಕಾಗಿದ್ದು. ಇದುವರೆಗೂ ಇತ್ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಒಂದು ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಹಿಂದಿನದೆಲ್ಲ ಇತಿಹಾಸ, ಇಲ್ಲಿ ಇತ್ತಂಡಗಳಿಗೂ ಜಯದ ಅಗತ್ಯವಿದೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌